ಗಂಗೊಳ್ಳಿ: ಜುಗಾರಿ ಅಡ್ಡೆಗೆ ಪೊಲೀಸರ ದಾಳಿ, ಐವರ ಬಂಧನ, ನಗದು ವಶ

Spread the love

ಗಂಗೊಳ್ಳಿ: ಜುಗಾರಿ ಅಡ್ಡೆಗೆ ದಾಳಿ, ಐವರ ಬಂಧನ, ನಗದು ವಶ

ಕುಂದಾಪುರ: ಜುಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದು ರೂ 65,800 /- ನಗದು ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ತ್ರಾಸಿ ನಿವಾಸಿ ಪ್ರಕಾಶ್ (30), ಹಕ್ಲಾಡಿ ನಿವಾಸಿ ಪ್ರದೀಪ (43), ಅನಗೋಡು ನಿವಾಸಿ ವಿಲ್ಫ್ರೇಡ್ (29), ಮೊವಾಡಿ ನಿವಾಸಿ ಸಿದ್ದ (37) ಮತ್ತು ಗುಜ್ಜಾಡಿ ನಿವಾಸಿ ಬಾಬು (60) ಎಂದು ಗುರುತಿಸಲಾಗಿದೆ.

ಗಂಗೊಳ್ಳಿ ಠಾಣಾ ಪಿಎಸ್ ಐ ಹರೀಶ್ ಆರ್ ಅವರು ರೌಂಡ್ಸ್ ನಲ್ಲಿದ್ದ ವೇಳೆ ತ್ರಾಸಿ ಗ್ರಾಮದ ಮೊವಾಡಿಯ ಸರ್ಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿದ್ದ ಬಗ್ಗೆಮಾಹಿತಿ ಬಂದಿದ್ದು, ಅದರಂತೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ನಗದು 65,800 /- ರೂ, ಇಸ್ಪೀಟ್ ಎಲೆಗಳು –52, ನೀಲಿ ಬಣ್ಣದ ಟಾರ್ಪಲ್ -1ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Please enter your comment!
Please enter your name here