ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ಹರೀಶ್ ಆರ್ ಅಧಿಕಾರ ಸ್ವೀಕಾರ

Spread the love

ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ಹರೀಶ್ ಆರ್ ಅಧಿಕಾರ ಸ್ವೀಕಾರ

ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ಹರೀಶ್ ಆರ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಕಡೂರು ಠಾಣೆಯಲ್ಲಿ ಸಂಚಾರ ಪಿಎಸ್ ಐ ಆಗಿದ್ದ ಹರೀಶ್ ಅವರನ್ನು ಗಂಗೊಳ್ಳಿ ಠಾಣೆಗೆ ವರ್ಗಾಯಿಸಿ ಜೂನ್ 15 ರಂದು ಆದೇಶವಾಗಿತ್ತು.

ಸೋಮವಾರ ನಿರ್ಗಮನ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ಅವರಿಂದ ಹರೀಶ್ ಆರ್ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಠಾಣಾಧಿಕಾರಿ ವಿನಯ್ ಅವರು ಕುಂದಾಪುರ ನಗರ ಠಾಣೆಗೆ ವರ್ಗಾವಣೆಯಾಗಿದ್ದಾರೆ.

ಈ ಹಿಂದೆ ಹರೀಶ್ ಅವರು ಸುಮಾರು 3 ವರ್ಷಗಳ ಕಾಲ ಕುಂದಾಪುರ ನಗರ ಠಾಣೆಯಲ್ಲಿ ತಮ್ಮ ಅತ್ಯುತ್ತಮ ಸೇವೆಯಿಂದ ಜನಾನುರಾಗಿಯಾಗಿದ್ದರು. ಬಳಿಕ ಕುಂದಾಪುರದಿಂದ ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣ ಠಾಣೆಗೆ ವರ್ಗಾವಣೆಗೊಂಡು ಬಳಿಕ ಕಡೂರು ಠಾಣೆಗೆ ವರ್ಗಾವಣೆಗೊಂಡಿದ್ದರು.


Spread the love