ಗಂಗೊಳ್ಳಿ: ಬಸ್ಸು ಡಿಕ್ಕಿಯಾಗಿ ರಸ್ತೆ ದಾಟಲು ನಿಂತಿದ್ದ ಪಾದಾಚಾರಿ ಮೃತ್ಯು

Spread the love

ಗಂಗೊಳ್ಳಿ: ಬಸ್ಸು ಡಿಕ್ಕಿಯಾಗಿ ರಸ್ತೆ ದಾಟಲು ನಿಂತಿದ್ದ ಪಾದಾಚಾರಿ ಮೃತ್ಯು

ಕುಂದಾಪುರ : ರಸ್ತೆ ದಾಟಲು ನಿಂತಿದ್ದ ವೇಳೆ ಖಾಸಗಿ ಬಸ್ಸೊಂದು ಢಿಕ್ಕಿಹೊಡೆದ ಪರಿಣಾಮ ಪಾದಚಾರಿ ಒರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ರಾತ್ರಿ ನಡೆದಿದೆ.

ಮೃತರನ್ನು ಸಾಸ್ತಾನ ಮೂಲದ ರಾಜು ಪೂಜಾರಿ ಎಂದು ಗುರುತಿಸಲಾಗಿದೆ.

ರವಿವಾರ ರಾತ್ರಿ ವೇಳೆ ತ್ರಾಸಿಯ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆಯ ಡಿವೈಡರ್ ಬಳಿ ರಸ್ತೆಯ ಅಂಚಿನಲ್ಲಿ ರಾಜು ಪೂಜಾರಿ ರಸ್ತೆ ದಾಟಲು ನಿಂತಿದ್ದರು. ಈ ವೇಳೆ ಕುಂದಾಪುರ ಕಡೆಯಿಂದ ಬೈಂದೂರಿನತ್ತ ಸಾಗುತ್ತಿದ್ದ ಬಸ್ ಅವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love