Home Mangalorean News Kannada News ಗಂಗೊಳ್ಳಿ ವರಾಹ ಸ್ವಾಮೀ ದೇವಸ್ಥಾನದ ಬಳಿ ಸೌಪರ್ಣಿಕ ನದಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆ

ಗಂಗೊಳ್ಳಿ ವರಾಹ ಸ್ವಾಮೀ ದೇವಸ್ಥಾನದ ಬಳಿ ಸೌಪರ್ಣಿಕ ನದಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆ

Spread the love

ಗಂಗೊಳ್ಳಿ ವರಾಹ ಸ್ವಾಮೀ ದೇವಸ್ಥಾನದ ಬಳಿ ಸೌಪರ್ಣಿಕ ನದಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆ

ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ವರಾಹ ಸ್ವಾಮಿ ದೇವಸ್ಥಾನದ ಸಮೀಪದ ಸೌಪರ್ಣಿಕ ನದಿಯಲ್ಲಿ ಶುಕ್ರವಾರ ಅಪರಿಚಿತ 60 -65 ವರ್ಷ ವಯಸ್ಸಿನ ಪುರುಷನ ಮೃತದೇಹ ಪತ್ತೆಯಾಗಿದೆ.

ಶುಕ್ರವಾರ ಬೆಳಿಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ವರಾಹ ಸ್ವಾಮಿ ದೇವಸ್ಥಾನದ ಸಮೀಪದ ಸೌಪರ್ಣಿಕ ನದಿಯಲ್ಲಿ ಅಪರಿಚಿತ 60 -65 ವರ್ಷ ವಯಸ್ಸಿನ ಪುರುಷನ ಶವವೊಂದು ತೇಲುತ್ತಿದ್ದು, 2 ದಿನ ಕಳೆದಿರಬಹುದು ಎಂದು ಅಂದಾಜಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ್ ಸಿನ್ನೂರ ಸಂಗಣ್ಣ ಸಿಬ್ಬಂಧಿಗಳಾದ ಸೂರ ನಾಯ್ಕ್ , ಗುಣಾಪಾಲ್, ರಾಜೇಶ್ ಡಿ ಸೋಜ ಶವವನ್ನು ಸ್ಥಳೀಯರಾದ ಗ್ರೇಷನ್ ಡಿ ಸೋಜ , ರಾಜೇಶ್ ಪಡುಕೋಣೆ , ಶ್ರೀಮತಿ ಶೀಲಾವತಿ,ಚಂದ್ರ ಮೊಗವೀರ 24×7 ಆಂಬ್ಯುಲೆನ್ಸ್ ಇದರ ಇಬ್ರಾಹಿಂ ಗಂಗೊಳ್ಳಿ , ವಿಲ್ಸನ್ ರೆಬೇರೊ ಹಾಗೂ ಬುಡ್ಡ ರಜ್ಜಬ್ ಸಹಾಯದಿಂದ ಶವವನ್ನು ನದಿಯಿಂದ ಮೇಲೆಕ್ಕೆತ್ತಿ, ಸದ್ಯ ಶವವನ್ನು ಬೈಂದೂರು ಸರಕಾರಿ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿರಿಸಿಲಾಗಿದೆ

ಮೃತ ವ್ಯಕ್ತಿಯ ಗುರುತು ಪರಿಚಯ ಇದ್ದಲ್ಲಿ ಗಂಗೊಳ್ಲಿ ಠಾಣಾ ಪಿ.ಎಸ್.ಐ ರವರ ಮೊಬೈಲ್ ಸಂಖ್ಯೆ 94808 05457 ಗೆ ಸಂಪರ್ಕಿಸಲು ಕೋರಲಾಗಿದೆ.


Spread the love

Exit mobile version