ಗಂಭೀರ ಆರೋಪ ಸರ್ಕಾರದ ಸಮರ್ಥನೆ ಎಷ್ಟು ಸಮಂಜಸ – ಸುಶೀಲ್ ನೊರೊನ್ಹಾ

Spread the love

ಗಂಭೀರ ಆರೋಪ ಸರ್ಕಾರದ ಸಮರ್ಥನೆ ಎಷ್ಟು ಸಮಂಜಸ – ಸುಶೀಲ್ ನೊರೊನ್ಹಾ

ಮಂಗಳೂರು: ಗುತ್ತಿಗೆದಾರರ ಬಿಲ್ ಪಾವತಿ ಕಮಿಷನ್ ಆರೋಪ ಕಳೆದ ಒಂದು ವರುಷದಿಂದ ಕೇಳಿ ಬರುತ್ತಿದ್ದು ರಾಜ್ಯ ಸರ್ಕಾರ ಅಥವಾ ಪ್ರಧಾನಿ ಮಂತ್ರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ನಾಚಿಕೆಗೇಡಿನ. ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಮಾಡುವುದು ಸರ್ವಸಾಮಾನ್ಯ. ಆದರೆ ಸಂಘ ಸಂಸ್ಥೆಗಳು, ಜನಸಾಮಾನ್ಯರು ಆರೋಪ ಮಾಡುವಾಗ ಆದರ ಗಂಭೀರತೆಯನ್ನು ನಿರ್ಲಕ್ಷಿಸುವುದು ಸರ್ಕಾರದ ವೈಪಲ್ಯಕೆ ಸಾಕ್ಷಿಯಾಗಿದೆ. ಒಬ್ಬ ಮಂತ್ರಿಗಳ ಮೇಲೆ ನೇರ ಆರೋಪ ಬಂದಾಗ ಅವರ ವಿವರಣೆ ಕೇಳುವುದು ಹಾಗೂ ಸೂಕ್ತ ಕ್ರಮ ಕೈಗೊಳ್ಳುವುದು ಮುಖ್ಯಮಂತ್ರಿಗಳ ಜವಾಬ್ದಾರಿಯಾಗಿದೆ. ಆದರ ಬದಲು ದಾಖಲೆವಿದಲಿ ಕೊಡಲಿ ಎಂದು ಹೇಳಿಕೆ ನೀಡಿರುವುದು ಎಷ್ಟು ಸಮಂಜಸ. ಆದರ ಬದಲು ಈ ಆರೋಪವನ್ನು ನ್ಯಾಯಂಗ ತನಿಖೆಗೆ ನಡೆಸಲಿ ಎಂದು ದ. ಕ ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹಾ ಆಗ್ರಹಿಸಿದಾರೆ.


Spread the love