ಗಜಪಡೆ, ಅಶ್ವರೋಹಿ ದಳಕ್ಕೆ 2 ಹಂತದ ಸಿಡಿಮದ್ದು ತಾಲೀಮು

Spread the love

ಗಜಪಡೆ, ಅಶ್ವರೋಹಿ ದಳಕ್ಕೆ 2 ಹಂತದ ಸಿಡಿಮದ್ದು ತಾಲೀಮು

ಮೈಸೂರು: ಗಜಪಡೆ ಹಾಗೂ ಅಶ್ವದಳಕ್ಕೆ ಭಾರೀ ಶಬ್ದದ ಪರಿಚಯ ಮಾಡಿಸುವ ಸಲುವಾಗಿ ಎರಡನೇ ಸುತ್ತಿನ ಸಿಡಿಮದ್ದು ತಾಲೀಮು ನಡೆಯಿತು

ದಸರಾ ವಸ್ತುಪ್ರದರ್ಶನ ಆವರಣದ ಪಾರ್ಕಿಂಗ್ ಜಾಗದಲ್ಲಿ ಎರಡನೇ ಹಂತದ ಫಿರಂಗಿ ತಾಲೀಮು ನಡೆಸಲಾಯಿತು. ಅಂಬಾರಿ ಆನೆ ಅಭಿಮನ್ಯು ನೇತೃತ್ವದ 12ಆನೆಗಳು, 41 ಕುದುರೆಗಳಿಗೆ  7 ಪಿರಂಗಿಗಳಲ್ಲಿ ಮೂರು ಸುತ್ತಿನಂತೆ ಒಟ್ಟು 21 ಕುಶಾಲತೋಪು ಸಿಡಿಸುವ ಮೂಲಕ ಭಾರಿ ಶಬ್ಧದ ಪರಿಚಯ ಮಾಡಿಸಲಾಯಿತು.

ಎರಡನೇ ಹಂತದ ಸಿಡಿಮದ್ದು ತಾಲೀಮಿನಲ್ಲಿ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ಪಾರ್ಥಸಾರಥಿ, ಮೂರನೇ ಬಾರಿಗೆ ಭಾಗವಹಿಸುತ್ತಿರುವ ಧನಂಜಯ ಹೆಚ್ಚು ಬೆದರಿದವು. ಮೊದಲ ಸಾಲಿನಲ್ಲಿ ಅರ್ಜುನ, ಅಭಿಮನ್ಯು, ಗೋಪಾಲಸ್ವಾಮಿ, ಭೀಮ, ಗೋಪಿ, ಕಾವೇರಿ, ವಿಜಯ ಆನೆಗಳನ್ನು ನಿಲ್ಲಿಸಲಾಗಿತ್ತು. ಎರಡನೇ ಸಾಲಿನಲ್ಲಿ ಸುಗ್ರೀವ, ಶ್ರೀರಾಮ, ಪಾರ್ಥಸಾರಥಿ, ಮಹೇಂದ್ರ ಆನೆಗಳನ್ನು ನಿಲ್ಲಿಸಿದ್ದರೆ, ಧನಂಜಯನನ್ನು ಪ್ರತ್ಯೇಕವಾಗಿ ನಿಲ್ಲಿಸಲಾಗಿತ್ತು. ಕುಶಾಲತೋಪಿನಿಂದ ಕಿವಿಗಡಚಿಕ್ಕುವ ಶಬ್ದ ಹೊರಹೊಮ್ಮುತ್ತಿದ್ದಂತೆ ಧನಂಜಯ ವಿಚಲಿತನಾಗಿ ಅತ್ತಿಂದಿತ್ತ ಚಲಿಸಲಾರಂಭಿಸಿದ. ಕಿರಿಯ ಆನೆ ಪಾರ್ಥಸಾರಥಿ ಬೆದರಿ ಹಿಂದಿದೆ ಚಲಿಸುತ್ತಿದ್ದ. ಈ ವೇಳೆ ಮಾವುತರು ಆನೆಗಳನ್ನು ನಿಯಂತ್ರಿಸಿದರು. ಸುಗ್ರೀವ, ಶ್ರೀರಾಮ ಗಾಬರಿಗೊಂಡರೂ ಹೆಚ್ಚಾಗಿ ಬೆದರಲಿಲ್ಲ.

ಧೈರ್ಯ ಪ್ರದರ್ಶಿಸಿದ ಆನೆಗಳು: ಮೊದಲ ಕುಶಾಲತೋಪು ತಾಲೀಮಿಗಿಂತ ಎರಡನೇ ತಾಲೀಮಿನಲ್ಲಿ ಆನೆಗಳು ಹೆಚ್ಚು ಧೈರ್ಯ ಪ್ರದರ್ಶಿಸಿದವು. ಮೊದಲ ತಾಲೀಮಿನಲ್ಲಿ ಬೆದರಿದ್ದ ಭೀಮ ಈ ಬಾರಿ ಅಲುಗಾಡದೆ ನಿಂತಿದ್ದ. ಕ್ಯಾಪ್ಟನ್ ಅಭಿಮನ್ಯು, ಅರ್ಜುನ ಎಂದಿನಂತೆ ಧೈರ್ಯ ಪ್ರದರ್ಶಿಸಿದರೆ, ಗೋಪಾಲಸ್ವಾಮಿ, ಕಾವೇರಿ, ವಿಜಯ ಆನೆಗಳು ಸಿಡಿಮದ್ದು ಸಿಡಿಸುತ್ತಿದ್ದಂತೆ ಮುಂದಡಿ ಇಡುತ್ತಿದ್ದವು. 105.3 ಡೆಸಿಬಲ್ ಶಬ್ದ ಹೊರಹೊಮ್ಮಿದರೂ ಕೊಂಚವು ಬೆದರದೆ ತಾಲೀಮನ್ನು ಯಶಸ್ವಿಗೊಳಿಸಿದವು. ತಾಯಿಯಾಗಿರುವ ಲಕ್ಷ್ಮೀ ಆನೆಯೊಂದಿಗೆ ಚೈತ್ರ ತಾಲೀಮಿನಲ್ಲಿ ಭಾಗವಹಿಸಿರಲಿಲ್ಲ.


Spread the love

Leave a Reply

Please enter your comment!
Please enter your name here