ಗಣಪನ ಬೆಣ್ಣೆ ಸೇವಿಸಿದ ರಾಗಾ

Spread the love

ಗಣಪನ ಬೆಣ್ಣೆ ಸೇವಿಸಿದ ರಾಗಾ

ನಂಜನಗೂಡು: ಬದನವಾಳಿನ ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ದೇಗುಲದಲ್ಲಿ ಗಣಪತಿಗೆ ಹಚ್ಚಿದ ಬೆಣ್ಣೆ ಸೇವಿಸುವ ಮೂಲಕ ಗಮನಸೆಳೆದರು.

ದೇವಸ್ಥಾನಕ್ಕೆ ಮಧ್ಯಾಹ್ನ 3.30ಕ್ಕೆ ರಾಹುಲ್ ಗಾಂಧಿ ಅವರಿಗೆ ದೇವಸ್ಥಾನದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಹಾಗೂ ದೇವಸ್ಥಾನದ ನಿರ್ವಾಹಕ ಅಧಿಕಾರಿ ಜಗದೀಶ್ ಕುಂಭ ಸ್ವಾಗತ ನೀಡಿದರು. ಇದೇ ವೇಳೆ ರಾಹುಲ್ ಗಾಂಧಿ ಅವರು ಗೋಪುರವನ್ನು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದರು. ಆ ನಂತರ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಗರ್ಭಗುಡಿಯ ಮುಂಭಾಗ ಕುಳಿತು ದೇವರಿಗೆ ಅರ್ಚನೆಯೊಂದಿಗೆ ಮಹಾಮಂಗಳಾರತಿ ಮಾಡಿದರು.

ಗಣಪತಿ ದೇವಸ್ಥಾನದ ಮುಂಭಾಗ ಮಂಗಳಾರತಿ ಮಾಡಿದ ನಂತರ ಗಣಪತಿಗೆ ಅಲಂಕರಿಸಿದ ಬೆಣ್ಣೆಯನ್ನು ಶಿವಕುಮಾರ್ ರವರು ರಾಹುಲ್ ಗಾಂಧಿಗೆ ಅವರಿಗೆ ಕೊಡಿಸಿದರು ಅದನ್ನು ಅವರು ಸೇವಿಸಿದರು. ಅಲ್ಲದೆ ಪಾರ್ವತಿದೇವಿಯ ಪಕ್ಕದಲ್ಲಿರುವ ಪಚ್ಚೆ ಲಿಂಗ ಹಾಗೂ ಪಚ್ಚೆ ಹಾರದ ಬಗ್ಗೆ ಪುರೋಹಿತರು ಮಾಹಿತಿ ನೀಡಿದರು. ಇದೇ ವೇಳೆ ನಂದಿ ಮುಂದೆ ದಾರವನ್ನು ಕೈಗೆ ಕಟ್ಟಿಸಿಕೊಂಡರು.

ಶಂಕರ್ ದೀಕ್ಷಿತ್, ವಿಶ್ವನಾಥ ದೀಕ್ಷಿತ್, ನೀಲಕಂಠ ದೀಕ್ಷಿತ್, ಸ್ಥಳ ಪುರೋಹಿತ ಶ್ರೀಕಂಠ ಜೋಯಿಸ್, ಸದಾಶಿವ. ಬದ್ರಿನಾಥ್ ಮೊದಲಾದವರು ಪೂಜೆ ಸಲ್ಲಿಸಿ ಆಶೀರ್ವಾದ ಮಾಡಿದರು. ಈ ವೇಳೆ ನಾಯಕರಾದ ಸಿದ್ದರಾಮಯ್ಯ, ಮುನಿಯಪ್ಪ, ಧ್ರುವನಾರಾಯಣ್, ಹೆಚ್.ಸಿ.ಮಹದೇವಪ್ಪ, ವಿಜಯಕುಮಾರ್, ಶಿವಣ್ಣ, ವೆಂಕಟೇಶ್, ಕೃಷ್ಣಮೂರ್ತಿ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣಧೀರ್ ಇನ್ನಿತರರು ಇದ್ದರು.


Spread the love