Home Mangalorean News Kannada News ಗಣಿ ಇಲಾಖೆಯಿಂದ 1300 ಲೋಡ್ ಅಕ್ರಮವಾಗಿ ದಾಸ್ತಾನಿಟ್ಟ ಮರಳು ವಶ

ಗಣಿ ಇಲಾಖೆಯಿಂದ 1300 ಲೋಡ್ ಅಕ್ರಮವಾಗಿ ದಾಸ್ತಾನಿಟ್ಟ ಮರಳು ವಶ

Spread the love

ಗಣಿ ಇಲಾಖೆಯಿಂದ 1300 ಲೋಡ್ ಅಕ್ರಮವಾಗಿ ದಾಸ್ತಾನಿಟ್ಟ ಮರಳು ವಶ

ಮಂಗಳೂರು: ಮಂಗಳೂರು ಹೊರವಲಯ ಅದ್ಯಪಾಡಿ ಡ್ಯಾಮ್ ಬಳಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಕ್ರಮ ಮರಳನ್ನು ಗಣಿ ಇಲಾಖೆಯ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ಬಜ್ಪೆ ಪೋಲಿಸರು ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಈ ಧಾಳಿ ನಡೆಸಿದ್ದು ಸುಮಾರು 1300 ಲೋಡ್ ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಧಾಳಿಯ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದು, ಪೋಲಿಸರು ಶೋಧ ಮುಂದುವರೆಸಿದ್ದಾರೆ.


Spread the love

Exit mobile version