ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

Spread the love

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು: ನಗರದ ಬಲ್ಮಠ ಗ್ರೌಂಡ್ ಮಿಷನ್ ಕಂಪೌಂಡ್ ರಸ್ತೆಯ ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಇಕೋನಾಮಿಕ್ಸ್ & ನಾರ್ಕೋಟಿಕ್ ಕ್ರೈ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಉತ್ತರಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಆಸ್ಕರ್ ಆಲಿ (22) ಎಂದು ಗುರುತಿಸಲಾಗಿದೆ.

ಆರೋಪಿಯಿಂದ ರೂ 30000 ಮೌಲ್ಯದ ಗಾಂಜಾ, ರೂ 500 ಮೌಲ್ಯದ ಮೊಬೈಲ್ ಫೋನ್, ಹಾಗೂ ನಗದು ರೂ 130 ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಮೌಲ್ಯ ರೂ 30830 ಆಗಿರುತ್ತದೆ.


Spread the love