ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

Spread the love

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಮಂಗಳೂರು: ಎನ್.ಡಿ.ಪಿ.ಎಸ್ ಕಯ್ದೆ ಅಡಿಯಲ್ಲಿ ಅಪರಾಧವೆಸಗಿದಗಿದವರ ಬಹಿರಂಗ ಪೆರೆಡ್ ನಂತರ ಕಾರ್ಯಾಚರಣೆಗೆ ಇಳಿದ ಮಂಗಳೂರು ನಗರ ಪೊಲೀಸ್, ಮಂಗಳೂರು ನಗರದಲ್ಲಿ ಇಕೋನಾಮಿಕ್ & ನಾರ್ಕೊಟಿಕ್ ಕ್ರೈಂ. ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾದಕ ದ್ರವ್ಯ ಸಾಗಾಟ/ಮಾರಾಟ/ಸೇವನೆ ಮಾಡುವವರ ಪತ್ತೆಯ ಬಗ್ಗೆ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ದಿನಾಂಕ 06-01-2021 ರಂದು ಮಂಗಳೂರು ನಗರದ ಕದ್ರಿ ಪದುವ ರಾಷ್ಟ್ರೀಯ ಹೆದ್ದಾರಿ 66 ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆಪಾದಿತರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಮಹಾರಾಷ್ಟ್ರದ ಮೂಲದ 1) ಸಂತೋಷ ವಸಂತ 29 ವರ್ಷ 2) ದಿಲೀಪ್ ನಾಗರಾವ್ ಗೋಡ್ಡಿ, 41 ವರ್ಷ, ಮತ್ತು 3) ಜೆಷ್ಟು ಮಾರ್ನಮಿಕಟ್ಟೆ ನಿವಾಸಿ ಇರ್ಮಾನ್ ಜುಬೇರ್, 32 ವರ್ಷ ಎಂದು ಗುರುತಿಸಲಾಗಿದೆ.

ಬಂಧಿತರಿಂದ ರೂ. 75,000/- ಮೌಲ್ಯದ ಸುಮಾರು 2.550 ಕೆ.ಜಿ ತೂಕದ ಗಾಂಜಾ, ರೂ.30.000/- ಮೌಲ್ಯದ ಆಕ್ಟಿವಾ ದ್ವಿಚಕ್ರ ವಾಹನ. 11.500/- ಮೌಲ್ಯದ ಮೊಬೈಲ್ 3 ಮೀನನ್ನು ನಗದು ರೂ. 1.030/- ನ್ನು ವಶಪಡಿಸಿಕೊಳ್ಳಲಗಿದೆ. ಸ್ವಾಧೀನಪಡಿಸಿದ ಎಲ್ಲಾ ಸೊತ್ತುಗಳ ಮೌಲ್ಯ ರೂಪಾಯಿ 1.17.530/- ಆಗಿರುತ್ತದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಐ.ಪಿ.ಎಸ್ ರವರ ಸೂಕ್ತ ಮಾರ್ಗದರ್ಶನದಲ್ಲಿ, ಉಪ-ಪೊಲೀಸ್ ಆಯುಕ್ತರುಗಳಾದ ಹರಿರಾಂ ಶಂಕರ್ ಐ.ಪಿ.ಎಸ್ ಮತ್ತು ವಿನಯ ಗಾಂವಕರ್ ರವರ ನಿರ್ದೇಶನದಂತೆ ಇಕೋನಾಮಿಕ್ & ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸತೀಶ್ ಎಂ.ಪಿ ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿ ಈ ದಾಳಿಯನ್ನು ಮಾಡಿರುತ್ತಾರೆ.


Spread the love