ಗಾಯಕಿ ಅನಿತಾ ಡಿಸೋಜಾ ರಿಗೆ 16 ನೇ ಕಲಾಕಾರ್ ಪುರಸ್ಕಾರ ಪ್ರದಾನ

Spread the love

ಗಾಯಕಿ ಅನಿತಾ ಡಿಸೋಜಾ ರಿಗೆ 16 ನೇ ಕಲಾಕಾರ್ ಪುರಸ್ಕಾರ ಪ್ರದಾನ

ಮಂಗಳೂರು: ಕಾರ್ವಾಲ್ ಕುಟುಂಬ ಮತ್ತು ಮಾಂಡ್ ಸೊಭಾಣ್ ನೀಡುವ 16 ನೇ ಕಲಾಕಾರ್ ಪುರಸ್ಕಾರ ಪ್ರದಾನ ಕಾರ್ಯಕ್ರಮವು ಅಬುದಾಭಿಯಲ್ಲಿ ನಡೆಯಿತು.

ಅನಿವಾಸಿ ಉದ್ಯಮಿ ಹಾಗೂ ಕೊಂಕಣಿ ಮುಂದಾಳು ಲಿಯೊ ರಾಡ್ರಿಗಸ್ ಪುರಸ್ಕøತ ಗಾಯಕಿ ಅನಿತಾ ಡಿಸೋಜ ರನ್ನು ಸನ್ಮಾನಿಸಿದರು. ಪುರಸ್ಕಾರವು ಶಾಲು, ಸ್ಮರಣಿಕೆ, ಫಲ-ಪುಷ್ಪ ಹಾಗೂ ರೂ 25,000/- ಒಳಗೊಂಡಿತ್ತು. ಸನ್ಮಾನಪತ್ರವನ್ನು ಮೈಕಲ್ ಡಿಸೋಜ ವಾಚಿಸಿದರು. ಗೋವಾದಿಂದ ಡಾ. ಪ್ರತಾಪ್ ನಾಯ್ಕ್ ಜೆ.ಸ. ಪ್ರಸ್ತಾವನೆ ನೀಡಿದರು.

ವೇದಿಕೆಯಲ್ಲಿ ಕೊಂಕಣಿ ಸಾಂಸ್ಕøತಿಕ ಸಂಘಟನೆಯ ಮುಖಂಡರಾದ ವಲೇರಿಯನ್ ಡಿಆಲ್ಮೇಡಾ, ಬೆನೆಟ್ ಡಿಮೆಲ್ಲೊ, ಫ್ರಾಂಕ್ಲಿನ್ ಡಿಕುನ್ಹಾ ಮತ್ತು ಸಂಧ್ಯಾ ವಾಸ್ ಉಪಸ್ಥಿತರಿದ್ದರು. ಅನ್ನು ಬಂಟ್ವಾಳ್ ನಿರೂಪಿಸಿದರು. ಅನಿತಾರ ಪತಿ ವಿವೇಕ್ ಸೆರಾವೊ ಹಾಗೂ ಮಗಳು ಅನ್ವಿಕಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾಂಡ್ ಸೊಭಾಣ್ 226 ನೇ ತಿಂಗಳ ವೇದಿಕೆ ಸರಣಿಯಲ್ಲಿ ವಿವಿಧ ಕವಿಗಳ ಹಾಡುಗಳಿಗೆ, ಎರಿಕ್ ಒಝೇರಿಯೊ ಸ್ವರ ಸಂಯೋಜಿಸಿ, ನಿರ್ದೇಶಿಸಿದ ಪುರ್ಣಾ ಪಾತೊಳಿ – 3 ಕಾರ್ಯಕ್ರಮ ನಡೆಯಿತು. ಆರಂಭಕ್ಕೆ ಜೆರಾಲ್ಡ್ ಡಿಮೆಲ್ಲೊ ಅಬುಧಾಬಿ ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


Spread the love