ಗಾಲಿ ಕುರ್ಚಿಯಲ್ಲಿಯೇ ರೋಡ್‌ ಶೋ ನಡೆಸಿದ  ಮಮತಾ ಬ್ಯಾನರ್ಜಿ

Spread the love

ಗಾಲಿ ಕುರ್ಚಿಯಲ್ಲಿಯೇ ರೋಡ್‌ ಶೋ ನಡೆಸಿದ  ಮಮತಾ ಬ್ಯಾನರ್ಜಿ

ಕೋಲ್ಕತ್ತ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ನಾಲ್ಕು ದಿನಗಳ ಬಳಿಕ ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಾಲಿಕುರ್ಚಿಯಲ್ಲಿಯೇ ಕುಳಿತು ಮಮತಾ ರೋಡ್‌ ಶೋ ನಡೆಸಿ, ಮತಯಾಚನೆ ಮಾಡಿದ್ದಾರೆ.

ಗಾಂಧಿ ಮೂರ್ತಿಯಿಂದ ಹಜ್ರಾಕ್ಕೆ ನಡೆಸಿದ ರೋಡ್‌ ಶೋನಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದು, ಮಮತಾ ಅವರಿಗೆ ಪಕ್ಷದ ನಾಯಕರು ಜೊತೆಯಾಗಿದ್ದರು ಎಂದು ಟಿಎಂಸಿ ತಿಳಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುವ ಸಲುವಾಗಿ ನಂದಿಗ್ರಾಮದಿಂದ ಸ್ಪರ್ಧಿಸುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

‘ನಂದಿಗ್ರಾಮದ ನನ್ನ ಸೋದರ, ಸೋದರಿಯರ ಪ್ರೇರಣೆ ಹಾಗೂ ಗೌರವದ ಸಂಕೇತವಾಗಿ, ನಾನು ಬಂಗಾಳ ವಿಧಾನಸಭೆ ಚುನಾವಣೆಯಲ್ಲಿಈ ಐತಿಹಾಸಿಕ ಸ್ಥಳದಿಂದ ಸ್ಪರ್ಧಿಸುತ್ತಿದ್ದೇನೆ. ಇಲ್ಲಿಗೆ ಬಂದು ಶಾಹೀದ್ ಕುಟುಂಬಗಳ ಜೊತೆಗೆ ಬಂಗಾಳ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುವುದು ನನಗೆ ಸಿಕ್ಕ ದೊಡ್ಡ ಗೌರವ’ ಎಂದು ಹೇಳಿದ್ದಾರೆ.

ನಾಮಪತ್ರ ಸಲ್ಲಿಸಿರುವ ನಂದಿಗ್ರಾಮಕ್ಕೆ ಮಾರ್ಚ್ 10ರಂದು ಎರಡು ದಿನಗಳ ಭೇಟಿಯಲ್ಲಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಚುನಾವಣಾ ಪ್ರಚಾರದ ಸಮಯದಲ್ಲಿ ಕೆಲವು ಅಪರಿಚಿತ ಜನರು ತಳ್ಳಿದ್ದರು. ಇದರಿಂದಾಗಿ ನಂದಿಗ್ರಾಮದ ರಸ್ತೆ ಮೂಲಕ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆತರಲಾಗಿತ್ತು.


Spread the love