ಗೂಂಡಾಗಿರಿ ಪ್ರವೃತ್ತಿಗೆ ಹೆದರಲ್ಲ: ಡಿಕೆಶಿಗೆ ಸವಾಲ್

Spread the love

ಗೂಂಡಾಗಿರಿ ಪ್ರವೃತ್ತಿಗೆ ಹೆದರಲ್ಲ: ಡಿಕೆಶಿಗೆ ಸವಾಲ್

ಚಾಮರಾಜನಗರ: ಗೂಂಡಾಗಿರಿ ಪ್ರವೃತ್ತಿ ರಾಜ್ಯದಲ್ಲಿ ನಡೆಯೋದಿಲ್ಲ , ನಿಮ್ಮ ಗೊಡ್ಡು ಬೆದರಿಕೆಗಳನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಎಂ.ಜಿ.ಮಹೇಶ್ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಯಲ್ಲಿ ಹೇಳಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ವಿರೋಧವಿಲ್ಲ, ಕಳೆದ 8 ವರ್ಷಗಳಲ್ಲಿ ಆಗಿರುವ ಬದಲಾವಣೆ ತಿಳಿಯಲು ಉಪಯೋಗಕಾರಿಯಾಗಿದೆ. ಭಾರತದಲ್ಲಿ ಆಗಿರುವ ಬದಲಾವಣೆಗಳ ಕುರಿತು ರಾಹುಲ್ ಗಾಂಧಿ ಅವರಿಗೆ ಮನದಟ್ಟು ಆಗಬೇಕು, ಕರ್ನಾಟಕ ಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿಯವರು ಪ್ರಜ್ಞಾವಂತರಿಗೆ ಉತ್ತರ ಕೊಡಬೇಕಾಗುತ್ತದೆ. ಭಾರತ್ ಜೋಡೋ ಯಾತ್ರೆ ಮಾಡ್ತಿರ ಏನಿದು ನಿಮ್ಮ ಅವಸ್ಥೆ, ಈ ದೇಶದಲ್ಲೇ ಬದುಕುವ ನೀವು ಜೋಡಣೆ ಮಾಡಬೇಕು ಅಂತೀರಾ, ನಿಮ್ಮ ತಾತ ಅವರು ತೆಗೆದುಕೊಡಿರುವ ತೀರ್ಮಾನ ಮತ್ತು ನಿಲುವಿನಿಂದ ಇಂದು ಬಾರತ ಅತಂತ್ರವಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರವನ್ನ ಬಿಟ್ಟು ಕೊಟ್ಟವರು ನೀವು, ಇಲ್ಲಿಯವರೆಗೂ ನೀವು ಇದನ್ನ ಜೋಡಿಸೋ ಮಾತೇ ಅಡಿಲ್ಲ ನಿಮ್ಮ ಯಾತ್ರೆಯು ರಾಜಕೀಯ ನಾಟಕದಂತಿದೆ, ಭಾರತ ರತ್ನವನ್ನು ಅಂಬೇಡ್ಕರ್ ಗೆ ಏಕೆ ಕೊಡಲಿಲ್ಲ, ನಿಮ್ಮ ತಾತ ಅಜ್ಜಿಯವರಿಗೆ ಪುಕ್ಕಟೆಯಾಗಿ ಭಾರತ ರತ್ನ ಕೊಡ್ತೀರಾ ನಿಮ್ಮ ನೈತಿಕತೆ ಕುರಿತು ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ ನೀವು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ನಿಮ್ಮ ಪಕ್ಷದ ಪ್ಲೆಕ್ಸ್ ಹರಿದುಹಾಕೋ ನೀಚತನ ನಮಗಿಲ್ಲ, ಪ್ರಜಾಪ್ರಭುತ್ವಕ್ಕೆ ಸವಾಲಾಕಿ ಬದುಕೋ ನಿಮ್ಮಿಂದ ನೈತಿಕತೆ ಪಾಠದ ಅಗತ್ಯ ನಮಗಿಲ್ಲ, ಡಿ.ಕೆ.ಶಿವಕುಮಾರ್ ನಿಮ್ಮ ಗೂಂಡಾ ಪ್ರವೃತ್ತಿ ನಮ್ಮತ್ರ ನಡೆಯೋದಿಲ್ಲ, ನಿಮ್ಮ ತಾಕತ್ತು ಗತ್ತು ಏನಂತ ನಮಗೆ ಗೊತ್ತಿದೆ, ಈ ಆಟ ನಮ್ಮಲ್ಲಿ ನಡೆಯೋದಿಲ್ಲ ಮುಖ್ಯಮಂತ್ರಿಗಳಿಗೆ ಧಮ್ಕಿ ಹಾಕುವ ಪ್ರವೃತ್ತಿಯನ್ನು ಬಿಟ್ಬಿಡಿ ಎಂದು ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ , ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಜಿಲ್ಲಾ ಮಾಧ್ಯಮ ವಕ್ತಾರ ಶಿವಕುಮಾರ್, ಮಾಜಿ ತಾ.ಪ.ಸದಸ್ಯ ಮಹದೇವಪ್ರಸಾದ್, ಮಾಧ್ಯಮ ಸಂಚಾಲಕ ಮಂಜುನಾಥ್ , ಮಾಡ್ರಹಳ್ಳಿ ನಾಗೇಂದ್ರ, ಮಲ್ಲೇಶ್, ಪುರಸಭಾ ಸದಸ್ಯ ಕಿರಣ್ ಗೌಡ ಇತರರು ಇದ್ದರು.


Spread the love