ಗೋಕಳ್ಳರನ್ನು ಹಿಡಿದ ಪೊಲೀಸರ ಕ್ರಮ ಶ್ಲಾಘನೀಯ – ಸುನೀಲ್‌ ಕೆ ಆರ್

Spread the love

ಗೋಕಳ್ಳರನ್ನು ಹಿಡಿದ ಪೊಲೀಸರ ಕ್ರಮ ಶ್ಲಾಘನೀಯ – ಸುನೀಲ್‌ ಕೆ ಆರ್

ಉಡುಪಿ: ಕಾರ್ಕಳ ದಲ್ಲಿ ನಿರಂತರವಾಗಿ ಗೋ ಕಳ್ಳತನ ನಡೆಯುತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಮುತುವರ್ಜಿ ವಹಿಸಿ ಗೋ ಕಳ್ಳರನ್ನು ಹಿಡಿದಿರುವುದು ಅತ್ಯಂತ ಶ್ಲಾಘನೀಯ, ಆದರೆ ಈ ಸಂದರ್ಭದಲ್ಲಿ ಅವರಿಂದ ಪ್ರತಿರೋಧ ಮತ್ತು ಇಲಾಖೆ ಮೇಲೆ ದಾಳಿ ಮಾಡಲು ಪ್ರಯತ್ನಿಸಿರುವುದು ಖಂಡನೀಯ ಎಂದು ಬಜರಂಗದಳ ಪ್ರಾಂತ ಸಂಯೋಜಕ ಸುನಿಲ್ ಕೆ ಆರ್ ತಿಳಿಸಿದ್ದಾರೆ,

ಭಯೋತ್ಪಾದಕರ ರೀತಿ ಗೋ ಕಳ್ಳರು ನಡೆಯುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು ಬಂಧನಕ್ಕೆ ಒಳಗಾಗಿರುವ ಗೋ ಕಳ್ಳರ ಕೇಸು ಅನ್ನು ಯಾವ ವಕೀಲರು ಕೂಡ ತೆಗೆದುಕೊಳ್ಳ ಬಾರದು ಎಂದು ಬಜರಂಗದಳ ಆಗ್ರಹಿಸುತ್ತದೆ ಮತ್ತು ಪೊಲೀಸ್‌ ಇಲಾಖೆಯ ಕರ್ತವ್ಯವನ್ನು ಶ್ಲಾಘಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love