ಗೋಡೆ ಬರಹ : ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಘಟನೆಗಳ ಕೈವಾಡ – ವಿ ಎಚ್ ಪಿ

Spread the love

ಗೋಡೆ ಬರಹ : ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಘಟನೆಗಳ ಕೈವಾಡ – ವಿ ಎಚ್ ಪಿ
ಮಂಗಳೂರು: ಕಳೆದ ಒಂದು ವಾರದಿಂದ ಮಂಗಳೂರು ನಗರದ ಕದ್ರಿ ಮತ್ತು ನ್ಯಾಯಾಲಯದ ಆವರಣದಲ್ಲಿ ಲಸ್ಕರ್ ಏ ತೋಹಿಭಾ ಮತ್ತು ತಾಲಿಬಾನ್ ನಂತಹ ಉಗ್ರಗಾಮಿ ಸಂಘಟನೆಗಳನ್ನು ಬೆಂಬಲಿಸಿ ದೇಶದ್ರೋಹಿ ಬರಹಗಳನ್ನು ಬರೆದು ಉಗ್ರಗಾಮಿಗಳಿಗೆ ಬೆಂಬಲ ನೀಡಿರುವುದು ಆತಂಕಕಾರಿಯಾಗಿದೆ ಮತ್ತು ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕೃತ್ಯ ಭಯೋತ್ಫಾದನೆಯ ಚಟುವಟಿಕೆಯ ಒಂದು ಭಾಗವಾಗಿದ್ದು ಮೇಲ್ನೋಟಕ್ಕೆ ಜಿಹಾದಿ ಮಾನಸಿಕತೆ ಇರುವ ಯುವಕರ ತಂಡ ಎಸಗಿರುವುದುಕಂಡು ಬರುತ್ತದೆ, ಇದರ ಹಿಂದೆ ಮುಸ್ಲಿಂ ಮೂಲಭೂತವಾದಿ ಸಂಘಟನೆಯ ಕೈವಾಡವಿದೆ ಎಂದು ಸಂಶಯ ವ್ಯಕ್ತವಾಗುತ್ತಿದೆ. ಅದಕ್ಕಾಗಿ ಈ ಪ್ರಕರಣವನ್ನು (ರಾಷ್ಟ್ರೀಯ ತನಿಖಾ ತಂಡ) ಮೂಲಕ ತನಿಖೆಗೆ ಒಳಪಡಿಸಬೇಕೆಂದು ವಿಶ್ವಹಿಂದೂ ಪರಿಷದ್ ರಾಜ್ಯ ಸರಕಾರಕ್ಕೆ ಆಗ್ರಹಿಸುತ್ತದೆ

ಕಳೆದ ಡಿಸೇಂಬರ್ ನಲ್ಲಿ NRC ವಿರೋಧಿ ಪ್ರತಿಭಟನೆಯಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೊಲೀಸರು, ಮಾಧ್ಯಮ ಮತ್ತು ಜನರ ಮೇಲೆ ಕಲ್ಲು ತೋರಿ ಹಲ್ಲೆ ನಡೆಸಿ ಪೊಲೀಸ್ ವಾಹನ ಮತ್ತು ಪೊಲೀಸ್ ಠಾಣೆಗೆ ಬೆಂಕಿ ಕೊಡಲು ಪ್ರಯತ್ನಿಸಿ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಿಸಲು ಪ್ರಯತ್ನ ಮಾಡಿದ್ದು ಹಲವಾರು ಮುಸ್ಲಿಂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದು ಅದರ ಹಿಂದೆ SDPI ಮತ್ತು PFI ಸಂಘಟನೆಗಳ ಕೈವಾಡವಿತ್ತು ಈ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ರವರಿಗೆ ಮನವಿ ನೀಡಿ, ತನಿಖೆಗೆ ಆಗ್ರಹಿಸಿದ್ದೇವೆ.

ಈ ಗೋಡೆ ಬರಹ ಕೃತ್ಯದಲ್ಲಿ ಕೂಡ ಇದೇ ಸಂಘಟನೆಗಳ ಪಾತ್ರವಿದೆ ಎಂದು ಸಂಶಯ ವ್ಯಕ್ತವಾಗುತ್ತಿದ್ದು. ಇದರ ಹಿಂದೆ SDPI ಮತ್ತು PFI ಸಂಘಟನೆಗಳ ಕೈವಾಡವಿದೆ ಆದರಿಂದ ಈ ಪ್ರಕರಣವನ್ನು NIA (ರಾಷ್ಟ್ರೀಯ ತನಿಖಾ ತಂಡ) ಮೂಲಕ ತನಿಖೆಗೆ ಒಳಪಡಿಸಬೇಕೆಂದು ರಾಜ್ಯ ಗೃಹ ಇಲಾಖೆಗೆ ವಿಶ್ವಹಿಂದೂ ಪರಿಷದ್ ಮನವಿಮಾಡುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಶರಣ್ ಪಂಪವೆಲ್ ತಿಳಿಸಿದರು.


Spread the love