ಗೋಪಾಲಸ್ವಾಮಿ ಬೆಟ್ಟದಲ್ಲಿ ಅಪಘಾತ

Spread the love

ಗೋಪಾಲಸ್ವಾಮಿ ಬೆಟ್ಟದಲ್ಲಿ ಅಪಘಾತ

ಚಾಮರಾಜನಗರ: ಪ್ರಸಿದ್ದ ಯಾತ್ರಾಸ್ಥಳ ಕರ್ನಾಟಕದ ಊಟಿ ಎಂದು ಕರೆಯಲ್ಪಡುವ ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಕಿರಿದಾದ ರಸ್ತೆಯಲ್ಲಿ ಬೆಟ್ಟದಿಂದ ಇಳಿಯುವಾಗ ಎದುರಿಗೆ ಬಂದ ದೇವಾಲಯದ ಅರ್ಚಕರ ಜೀಪಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ವಾರಾಂತ್ಯವಾಗಿರುವ ಹಿನ್ನಲೆಯಲ್ಲಿ ಭಕ್ತರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿದ್ದರು. ಭಕ್ತರು ಮತ್ತು ಪ್ರವಾಸಿಗರನ್ನು ಬೆಟ್ಟದಲ್ಲಿ ಹತ್ತಿಸಿಕೊಂಡು ಬರುತ್ತಿದ್ದ ಬಸ್ ಗೆ ದೇವಾಲಯದ ಅರ್ಚಕರಿದ್ದ ಜೀಪು ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಟ್ಟಕ್ಕೆ ಹೊಂದಿಕೊಂಡಂತೆ ನಿಂತು  ಕೊಂಡಿತು. ಅರ್ಚಕರ ಜೀಪು ಪಕ್ಕದ ಹಳ್ಳಕ್ಕೆ ತಿರುಗಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಕೆ.ಎಸ್. ಆರ್.ಟಿ.ಸಿ ಬಸ್ ಬೆಟಕ್ಕೆ ತಾಗಿಕೊಂಡು ನಿಂತು ಕೊಂಡಿದ್ದರಿಂದ ಬಾಗಿಲು ತೆರೆಯಲು ಸಾಧ್ಯವಾಗದೆ ಪ್ರಯಾಣಿಕರು ಕಿಟಕಿ ಮೂಲಕ ಜಿಗಿದು ರಸ್ತೆಯಲ್ಲಿ ನಿಲ್ಲುವಂತಾಯಿತು.

ಜೀಪು ಮುಂಭಾಗ ಸ್ಪಲ್ಪ ಜಖಂ ಆಗಿದೆ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನ ಎಡ ಭಾಗ ಬೆಟ್ಟಕ್ಕೆ ತಾಕಿಕೊಂಡು ನಿಂತಿದ್ದರಿಂದ ಜಖಂ ಆಗಿದ್ದು ಬಿಟ್ಟರೆ ಯಾವುದೇ ರೀತಿಯ ಅನಾಹುತವಾಗಿಲ್ಲ.


Spread the love