ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ: ಪ್ರಧಾನಿಗೆ ಕಟೀಲ್ ಅಭಿನಂದನೆ

Spread the love

ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ: ಪ್ರಧಾನಿಗೆ ಕಟೀಲ್ ಅಭಿನಂದನೆ

ರಕ್ಷಾ ಬಂಧನ ಹಾಗೂ ಓಣಂ ಹಬ್ಬದ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲ ಗ್ರಾಹಕರಿಗೆ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಮೇಲೆ ರೂ. 200 ಹಾಗೂ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್ ಗಳಿಗೆ ರೂ. 400 ಸಬ್ಸಿಡಿಯನ್ನು ತೈಲ ಕಂಪೆನಿಗಳಿಗೆ ನೇರವಾಗಿ ನೀಡುವ ಮೂಲಕ ದೇಶವಾಸಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಸುಮಾರು 33 ಕೋಟಿ ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಇವರು ಅಭಿನಂದಿಸಿದ್ದಾರೆ.


Spread the love