ಗ್ರಾಪಂ ಚುನಾವಣೆ: ಬೈಂದೂರು ತಾಲೂಕಿನಲ್ಲಿ ಶೇ. 71.28 ಮತದಾನ

Spread the love

ಗ್ರಾಪಂ ಚುನಾವಣೆ: ಬೈಂದೂರು ತಾಲೂಕಿನಲ್ಲಿ ಶೇ. 71.28 ಮತದಾನ

ಕುಂದಾಪುರ: ಬೈಂದೂರು ತಾಲೂಕಿನ ಹದಿನೈದು ಗ್ರಾಮ ಪಂಚಾಯತ್ನ 128 ಮತಗಟ್ಟೆಗಳಲ್ಲಿ ನಡೆದ ಮೊದಲ ಹಂತದ ಚುನಾವಣೆ ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದರೂ ಶೇಕಡವಾರು ಲೆಕ್ಕಚಾರದಲ್ಲಿ ಮಧ್ಯಾಹ್ನದ ಸುಮಾರಿಗೆ ಕೊಂಚ ಬಿರುಸು ಪಡೆದುಕೊಂಡಿದೆ. ಸಂಜೆ 5 ಗಂಟೆಯ ಮುಕ್ತಾಯದ ವೇಳೆಗೆ ಶೇ. 71.28 ಮತದಾನ ನಡೆದಿದೆ.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ವಿರಳ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳಿಗೆ ಮತದಾರರು ಬಂದು ಮತದಾನ ಮಾಡಿದರು. ಹಿರಿಯ ನಾಗರಿಕರು ಬೆಳಿಗ್ಗಿನಿಂದಲೇ ಮತದಾನದ ಪ್ರಕ್ರಿಯೆಯಲ್ಲಿ ಉತ್ಸಾಹ ತೋರುತ್ತಿರುವುದು ಕಂಡುಬಂತು.

ಪ್ರತೀ ಮತದಾನ ಕೇಂದ್ರಗಳಲ್ಲೂ ಕೋವಿಡ್ ನಿಯಮ ಪಾಲನೆ ಮಾಡಲಾಗಿದ್ದು ಮಾಸ್ಕ್ ಧಾರಣೆ, ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿತ್ತು. ಮತ ಚಲಾವಣೆಗೂ ಮೊದಲೇ ಸ್ಯಾನಿಟೈಜ್, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿದ್ದು ಮಾಸ್ಕ್ ಧರಿಸದೆ ಬಂದವರನ್ನು ಮತದಾನ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ವಾಪಾಸ್ ಕಳುಹಿಸುತ್ತಿರುವ ದೃಶ್ಯ ಸಾಮಾನ್ಯವಾಗಿದ್ದವು.

ತಾಲೂಕಿನ 15 ಗ್ರಾಮ ಪಂಚಾಯಿತಿಗಳಿಗೆ 128 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದ್ದು ಒಟ್ಟು 128 ಮತಗಟ್ಟೆಗಳಿಗೆ 564 ಸಿಬ್ಬಂದಿ ನಿಯೋಜಿತರಾಗಿದ್ದಾರೆ. ಮತದಾನಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, 8 ಎಸ್ಐ, 1 ಡಿವೈಎಸ್ಪಿ, 2 ಸಿಪಿಐ, 105 ಮಂದಿ ತರಬೇತಿ ಹಂತದ ಪೆÇಲೀಸ್ ಸಿಬ್ಬಂದಿ, 1 ಕೆಎಸ್ಆರ್ಪಿ ತುಕಡಿ, ಮತ್ತು ಡಿಆರ್ಸಿ ಸಿಬ್ಬಂದಿ ಸೇರಿ ಒಟ್ಟು 269 ಸುರಕ್ಷಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬೈಂದೂರು ತಾಲೂಕಿನ ಶಿರೂರು, ಉಪ್ಪುಂದ, ಬಿಜೂರು, ಕೆರ್ಗಾಲು, ಕಿರಿಮಂಜೇಶ್ವರ, ಕಂಬದಕೋಣೆ, ನಾವುಂದ, ಮರವಂತೆ, ನಾಡ, ಹೇರೂರು, ಕಾಲ್ತೋಡು, ಕೊಲ್ಲೂರು, ಗೋಳಿಹೊಳೆ, ಜಡ್ಕಲ್, ಹಳ್ಳಿಹೊಳೆ ಗ್ರಾಮ ಪಂಚಾಯತ್ಗಳಲ್ಲಿ ಮಂಗಳವಾರ ಚುನಾವಣೆ ನಡೆಯಿತು. ಬÉೈಂದೂರು ತಾಲೂಕಿನ 88,659 ಮತದಾರರ ಪೈಕಿ 63,198 ಮಂದಿ ಮತದಾನ ಮಾಡಿದ್ದಾರೆ. 43,374 ಪುರುಷರ ಪೈಕಿ 28,507 ಮಂದಿ ಹಾಗೂ 45,284 ಮಹಿಳೆಯರ ಪೈಕಿ 34,691 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬೈಂದೂರು ಕಿರಿಮಂಜೇಶ್ವರ ಕೇಂದ್ರದಲ್ಲಿ 95 ರ ವೃದ್ದೆಯಿಂದ ಮತದಾನ:
ಕಿರಿಮಂಜೇಶ್ವರ ತೆಂಕಮನೆ ನಿವಾಸಿ ತುಂಗಮ್ಮ ತನ್ನ 95 ವರ್ಷದ ಇಳಿ ವಯಸ್ಸಿನಲ್ಲಿ ಕೂಡ ಬೆಳಿಗ್ಗೆ ಮನೆಯವರೊಂದಿಗೆ ಬಂದು ಉತ್ಸಾಹದಿಂದ ಮತ ಚಲಾಯಿಸಿದರು. ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಪ್ರತೀ ಚುನಾವಣೆಯಲ್ಲೂ ತಪ್ಪದೇ ಮತದಾನ ಮಾಡುತ್ತೇನೆ. ಮತದಾನ ಮಾಡುವುದು ನನ್ನ ಹಕ್ಕು. ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡರು. ಬಿಜೂರಿನ ವಿಶೇಷ ಚೇತನ ಸಹೋದರಿಯರಾದ ನಾಗರತ್ನ ಹಾಗೂ ಜ್ಯೋತಿ ಅವರು ಬೇರೆಯವರ ಸಹಕಾರದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಿರುಸಿನ ಮತದಾನ:
ನಕ್ಸಲ್ ಪೀಡಿತ ಪ್ರದೇಶಗಳಾದ ಹಳ್ಳಿಹೊಳೆ, ಜಡ್ಕಲ್, ಮುದೂರು, ಸೆಳ್ಕೊಡು ಭಾಗದಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯಿತು. ಇಲ್ಲಿನ ಬಹುತೇಕ ಮತಗಟ್ಟೆಗಳಲ್ಲಿ 12 ಗಂಟೆಯ ಸುಮಾರಿಗೆ ಶೇ.50 ಕ್ಕೂ ಹೆಚ್ಚು ಮತದಾನ ಪೂರ್ಣಗೊಂಡಿತ್ತು. ಈ ಭಾಗವು ಅತೀ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಶಸಸ್ತø ಮೀಸಲು ಪಡೆ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನದನು ನಿಯೋಜಿಸಲಾಗಿತ್ತು. ಅಲ್ಲದೇ ಮರಳು ಚೀಲಗಳನ್ನು ಇಟ್ಟು ಪ್ರತಿಬಂಧಕಾಜ್ಞೆ ವಿಧಿಸಲಾಗಿದ್ದು, ವಿಡಿಯೋ ಕ್ಯಾಮೆರಾ ನಿಗಾ ಇರಿಸಲಾಗಿತ್ತು.


Spread the love