ಗ್ರಾಪಂ. ಚುನಾವಣೆ: ಹೆಬ್ರಿ ತಾಲೂಕಿನಲ್ಲಿ ಮತದಾನ ಆರಂಭ

Spread the love

ಗ್ರಾಪಂ. ಚುನಾವಣೆ: ಹೆಬ್ರಿ ತಾಲೂಕಿನಲ್ಲಿ ಮತದಾನ ಆರಂಭ

ಹೆಬ್ರಿ: ಸ್ಥಳೀಯ ಸಂಸತ್ ಎಂದೇ ಹೆಸರಾದ ಗ್ರಾಮ ಪಂಚಾಯತ್ ಗಳ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದ್ದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಬೆಳಿಗ್ಗಿನಿಂದಲೇ ಮತದಾನ ಬಿರುಸಿನಿಂದ ಆರಂಭವಾಗಿದೆ.

ಹೆಬ್ರಿ ತಾಲೂಕಿನ 9 ಗ್ರಾಪಂಚಾಯತ್ ಗಳ 122 ಸ್ಥಾನಗಳಲ್ಲಿ 115 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ

ಹೆಬ್ರಿ ತಾಲೂಕು ಆದ ಬಳಿಕ ಮೊದಲ ಗ್ರಾಮ ಪಂಚಾಯತ್ ಚುನಾವಣೆ ಎದುರಿಸುತ್ತಿದ್ದು 264 ಚುನಾವಣಾ ಸಿಬಂದಿ ಹಾಗೂ 130 ಪೊಲೀಸ್ ಸಿಬಂದಿಗಳು ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೋವಿಡ್ 19 ಹಿನ್ನಲೆಯಲ್ಲಿ ಚುನಾವಣಾ ಸಿಬಂದಿಗಳು ಕಡ್ಡಾಯವಾಗಿ ನಿಯಮ ಪಾಲಿಸುತ್ತಿದ್ದು ಮಾಸ್ಕ್ ಧಾರಣೆ, ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ. ಮತ ಚಲಾವಣೆಗೂ ಮೊದಲೇ ಸ್ಯಾನಿಟೈಜ್, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿದ್ದು ಮಾಸ್ಕ್ ಧರಿಸದೆ ಬಂದವರನ್ನು ಮತದಾನ ಕರ್ತವ್ಯದಲ್ಲಿರುವ ಸಿಬಂದಿಗಳು ವಾಪಾಸ್ ಕಳುಹಿಸುತ್ತಿರುವ ದೃಶ್ಯ ಕಂಡು ಬಂದಿದೆ.


Spread the love