ಗ್ರಾಪಂ ಸದಸ್ಯರ ಗೌರವ ಧನ ಹೆಚ್ಚಳ: ಮಂಜುನಾಥ ಭಂಡಾರಿ ಹೋರಾಟಕ್ಕೆ ಸಿಕ್ಕ ಜಯ – ರೋಶ್ನಿ ಒಲಿವರ್

Spread the love

ಗ್ರಾಪಂ ಸದಸ್ಯರ ಗೌರವ ಧನ ಹೆಚ್ಚಳ: ಮಂಜುನಾಥ ಭಂಡಾರಿ ಹೋರಾಟಕ್ಕೆ ಸಿಕ್ಕ ಜಯ – ರೋಶ್ನಿ ಒಲಿವರ್

ಕಳೆದ 2 ಅಧಿವೇಶನದಲ್ಲಿ ಗ್ರಾಮಪಂಚಾಯತ್ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಕನಿಷ್ಟ ಪಕ್ಷ ತಿಂಗಳಿಗೆ ಹತ್ತು ಸಾವಿರ ರೂಪಾಯಿ ಹೆಚ್ಚಿಸಬೇಕೆಂದು ಹಾಗೂ ಕೇರಳ ಮಾದರಿಯ ಆಡಳಿತವನ್ನು ಅನುಸರಿಸಬೇಕೆಂಬುದರ ಕುರಿತು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿಯವರು ವಿಧಾನ ಪರಿಷತ್ ನಲ್ಲಿ ಸುರ್ಧಿಘವಾಗಿ ಚರ್ಚೆ ನಡೆಸಿ ಗಮನ ಸೆಳೆದು, ಚುನಾಯಿತ ಪ್ರತಿನಿಧಿಗಳ ಬೇಡಿಕೆಗೆ ಸ್ಪಂದಿಸಿ ಗೌರವಧನದ ಆದೇಶ ಬರುವವರೆಗೂ ಹೋರಾಟ ಮಾಡಿ ಯಶಸ್ವಿಯಾಗಿರುತ್ತಾರೆ.
ಇವರಿಗೆ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಪರವಾಗಿ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಭಿನಂದನೆ ಸಲ್ಲಿಸುತ್ತಿದೆ ಎಂದು ರಾಜ್ಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಹ ಸಂಚಾಲಕಿ, ಮೈಸೂರು ವಿಭಾಗದ ಉಸ್ತುವಾರಿ ರೋಶ್ನಿ ಒಲಿವರ್ ವರು ಪ್ರತಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ..


Spread the love