ಗ್ರಾಮಗಳ ಗ್ರಂಥಾಲಯಗಳಿಂದ ಪ್ರೇರಣೆ ಮೂಡಬೇಕು: ಸಿಇಓ ಡಾ. ಕುಮಾರ್

Spread the love

ಗ್ರಾಮಗಳ ಗ್ರಂಥಾಲಯಗಳಿಂದ ಪ್ರೇರಣೆ ಮೂಡಬೇಕು: ಸಿಇಓ ಡಾ. ಕುಮಾರ್

ಮಂಗಳೂರು: ಜಿಲ್ಲೆಯ ಗ್ರಾಮ ಪಂಚಾಯತ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯಗಳು ಸ್ಥಳೀಯ ಗ್ರಾಮಸ್ಥರಿಗೆ ಪ್ರೇರಣೆ ಮೂಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರು ಕರೆ ನೀಡಿದರು.

ಅವರು ಸೆ.7ರ ಬುಧವಾರ ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿರುವ ಗ್ರಂಥಾಲಯಗಳು ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆಯ ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿನ ಮೆಲ್ವಿಚಾರಕರು ಜವಬ್ದಾರಿ, ಹೊಣೆಗಾರಿಗೆ ಹಾಗೂ ಅಭಿರುಚಿಯಿಂದ ಕೆಲಸ ಮಾಡಬೇಕು. ಗ್ರಂಥಾಲಯಗಳು ಜ್ಞಾನ ದೇಗುಲಗಳು, ಜ್ಞಾನವೇ ದೇವರು, ಅಲ್ಲಿರುವವರು ಸಕಾರಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಈ ದಿಸೆಯಲ್ಲಿ ಅವರು ಮಾಡುವ ಕೆಲಸ ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆಯಾಗಿದೆ. ಅವರು ಒಂದು ರೀತಿ ಶಾಲಾ ಶಿಕ್ಷಕರಂತೆ ಕೆಲಸ ಮಾಡುತ್ತಾರೆ, ಆ ಅವಕಾಶ ನಿಮ್ಮದಾಗಿದೆ, ಈ ವೃತ್ತಿಯನ್ನು ಗೌರವಿಸಿ ಗ್ರಂಥಾಲಯಕ್ಕೆ ಬರುವವರನ್ನು ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಮೇಲ್ವಿಚಾರಕರು ಮುಖ್ಯವಾಗಿ ಸಮಯವನ್ನು ಪರಿಪಾಲಿಸಬೇಕು, ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರ ವರೆಗಿನ ಗ್ರಂಥಾಲಯಗಳನ್ನು ತೆರೆಯಬೇಕು, ಗ್ರಾಮವ್ಯಾಪ್ತಿಯಲ್ಲಿರುವ ಪ್ರತಿಯೊಂದು ಶಾಲೆ, ಕಾಲೇಜು ವಿದ್ಯಾರ್ಥಿಗಳ ಪಟ್ಟಿಯನ್ನು ಇಟ್ಟುಕೊಳ್ಳಬೇಕು, ಗ್ರಾಮದ ಪ್ರತಿ ಕುಟುಂಬದ ಒಬ್ಬರನ್ನಾದರು ಗ್ರಂಥಾಲಯದ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಬೇಕು. ಡಿಜಿಟಲ್ ಲೈಬ್ರರಿಗಳು ಕ್ರಿಯಾಶೀಲತೆಯಿಂದ ಕೂಡಿರಬೇಕು, 8,9,10ನೇ ತರಗತಿಗಳು ಪಿ.ಯು.ಸಿ ಹಾಗೂ ಪದವಿ ಕಾಲೇಜುಗಳ ಪಠ್ಯ ಪುಸ್ತಕಗಳ ಪಿಡಿಎಫ್ ಕಾಪಿಗಳು ದೊರೆಯಬೇಕು ಹಾಗೂ ಅವುಗಳನ್ನು ಸುಲಭವಾಗಿ ಪೆನ್‍ಡ್ರೈವ್‍ನಲ್ಲಿ ವಿದ್ಯಾರ್ಥಿಗಳು ಪಡೆಯುವಂತಿರಬೇಕು, ಗ್ರಂಥಮಿತ್ರ ಯೋಜನೆಯನ್ನು ಸಮಪರ್ಕವಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಗ್ರಂಥಾಲಯಾಧಿಕಾರಿ ಗಾಯತ್ರಿ, ಶಿಕ್ಷಣ ಫೌಂಡೇಷನ್‍ನ ಸಂಯೋಜಕ ರಕ್ಷಿತ್ ಸೇರಿದಂತೆ ಜಿಲ್ಲೆಯ ಗ್ರಾಮಗಳ ಗ್ರಂಥಾಲಯಗಳ ಮೇಲ್ವಿಚಾರಕರು ಸಭೆಯಲ್ಲಿದ್ದರು.


Spread the love

Leave a Reply

Please enter your comment!
Please enter your name here