ಗ್ರಾಮೀಣ ಕ್ರೀಡೆಗಳೊಂದಿಗೆ ‘ಗದ್ದೆ ಬದಿ ಒಂದು ದಿವಸ’ ಸಂಭ್ರಮಿಸಿದ ಮಟಪಾಡಿಯ ನಾಗರಿಕರು

Spread the love

ಗ್ರಾಮೀಣ ಕ್ರೀಡೆಗಳೊಂದಿಗೆ ‘ಗದ್ದೆ ಬದಿ ಒಂದು ದಿವಸ’ ಸಂಭ್ರಮಿಸಿದ ಮಟಪಾಡಿಯ ನಾಗರಿಕರು

ಬ್ರಹ್ಮಾವರ: ಪಾರಂಪರಿಕವಾಗಿ ಬೆಳೆದು ಬಂದ ಹಳ್ಳಿ ಜನಪದ ಕ್ರೀಡೆಗಳು ಇಂದಿನ ಕಂಪ್ಯೂಟರ್ ಯುಗದಲ್ಲಿ ಮೂಲೆ ಗುಂಪಾಗುತ್ತಿವೆ. ಈ ನಿಟ್ಟಿನಲ್ಲಿ ಕೆಸರುಗದ್ದೆ ಜನಪದ ಕ್ರೀಡೆಯನ್ನು ಉಳಿಸುವ ಉದ್ದೇಶದಿಂದ ಬ್ರಹ್ಮಾವರ ತಾಲೂಕಿನ ಮಟಪಾಡಿಯಲ್ಲಿ 42ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಟಪಾಡಿ, ಬ್ರಹ್ಮಾವರ ಮತ್ತು ರೋಟರಿ ರಾಯಲ್ ಸಂಸ್ಥೆ ಬ್ರಹ್ಮಾವರ ವತಿಯಿಂದ ‘ಗದ್ದೆ ಬದಿ ಒಂದು ದಿವಸ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಯುವಕರು, ಹಿರಿಯರು, ಮಕ್ಕಳು ಪರಸ್ಪರ ಕೆಸರೆರೆಚಿಕೊಂಡು ಸಂಭ್ರಮಿಸುತ್ತಿದುದು ಕಂಡು­ಬಂದಿತು. ಕೆಸರು ಗದ್ದೆ ಓಟದಲ್ಲಿ ಆಯತಪ್ಪಿ ಕೆಸರಿನಲ್ಲಿ ಬೀಳುತ್ತಿದ್ದದು, ನೋಡುಗರಿಗೆ ತಾವೂ ಕೂಡ ಕೆಸರಿಗೆ ಇಳಿಯ­ಬೇಕೆನ್ನುವಂತೆ ಮಾಡಿತ್ತು.

ಕಾರ್ಯಕ್ರಮವನ್ನು ಹಿಂಗಾರವನ್ನು ಅರಳಿಸುವ ಮೂಲಕ ಸಿವಿಲ್ ಇಂಜಿನಿಯರ್ ಶ್ರೀಧರ್ ಭಂಡಾರಿ ಉದ್ಘಾಟಿಸಿದರು. ನಂತರ ಕೃಷಿಗದ್ದೆಯಲ್ಲಿ ಗದ್ದೆಗೆ ಹಾಲನ್ನ ಎರೆಯುವ ಮುಖಾಂತರ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು

ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಹಿಮ್ಮುಖ ಓಟ, ಮೂಟೆ ಓಟ, ಮಡಕೆ ಒಡೆಯುವ ಸ್ಪರ್ಧೆ ಹಾಗೂ ಇತರ ಸ್ಫರ್ಧೆಗಳು ನಡೆದವು.

ಕಾರ್ಯಕ್ರಮದಲ್ಲಿ ಊರಿನ ಹಿರಿಯ ಕೃಷಿಕರಾದ ಶಿವರಾಮ್ ಶೆಟ್ಟಿಗಾರ ಮತ್ತು ರಾಮನಾಯಕ್ ಬಲ್ಜಿ ಇವರನ್ನ ಸನ್ಮಾನಿಸಲಾಯಿತು

ಸಭಾಧ್ಯಕ್ಷತೆಯನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ನಾಯರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಎಂ ಶ್ಯಾಮಗ ರೋಟರಿ ಸೇನಾನಿ ಬ್ರಹ್ಮವರ. ವಿಶ್ವನಾಥ್ ಶೆಟ್ಟಿ ಅಧ್ಯಕ್ಷರು ರೋಟರಿ ರಾಯಲ್ ಬ್ರಹ್ಮಾವರ ಶರಣ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ರೋಟರಿ ರಾಯಲ್ ಗಿರೀಶ್ ಚಂದ್ರಚಾರ್ಯ ಆಡಳಿತ ಮುಖ್ಯಸ್ಥರು ಚಿತ್ತಾರಿ ನಂದಿಕೇಶ್ವರ ದೇವಸ್ಥಾನ ಮಟಪಾಡಿ ಕೆ ಪಿ ಇಬ್ರಾಹಿಂ ಉದ್ಯಮಿಗಳು ಮಟಪಾಡಿ ಸ್ಯಾಮ್ಸನ್ ಸಿಕ್ವೇರಾ ಮಟಪಾಡಿ ಜಯರಾಮ್ ನಾಯರಿ ಮಟಪಾಡಿ ಸೂರ್ಯನಾರಾಯಣ ಗಾಣಿಗ ಚಂದ್ರಶೇಖರ್ ನಾಯಕ್ ಉಪಸ್ಥಿತರಿದ್ದರು

ಕ್ರೀಡಾಕೂಟದ ನಿರೂಪಣೆಯನ್ನು ಶರೋನ್ ಸಿಕ್ವೇರಾ ಮತ್ತು ಚೇತನ್ ಪೂಜಾರಿ ನಿರ್ವಹಿಸಿದರು


Spread the love