ಘೋಷಣೆಗಷ್ಟೇ ಸೀಮಿತವಾದ ಕೇಂದ್ರ ಬಜೆಟ್ – ಹರೀಶ್ ಕಿಣಿ

Spread the love

ಘೋಷಣೆಗಷ್ಟೇ ಸೀಮಿತವಾದ ಕೇಂದ್ರ ಬಜೆಟ್ – ಹರೀಶ್ ಕಿಣಿ

ಉಡುಪಿ: ಕೇಂದ್ರ ಬಜೆಟ್ ಕೇವಲ ಘೋಷಣೆಯ ಬಜೆಟ್ ಆಗಿದೆ. ಜನರಿಗೆ ಭಾರವಾಗಿರುವ ಪೇಟ್ರೋಲ್, ಡಿಸೇಲ್, ಪಡಿತರ ಎಣ್ಣೆ, ದಿನಬಳಕೆ ಗ್ಯಾಸ್‍ಗಳ ಬೆಲೆಯಲ್ಲಿ ಇಳಿಕೆ ಇಲ್ಲದಿರುವುದು ನಿರಾಸೆ ಮೂಡಿಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಹರೀಶ್ ಕಿಣಿ ಹೇಳಿದ್ದಾರೆ.

ಮಧ್ಯಮ ವರ್ಗದ ಮೇಲಿನ ತೆರಿಗೆ ವಿನಾಯಿತಿ ಸ್ಪಲ್ಪ ಮಟ್ಟಿನ ಸಮಾಧಾನ ಮೂಡಿಸಿದೆಯೇ ಹೊರತು, ಮಧ್ಯಮ ವರ್ಗದವರ ಜನರ ಜೀವನ ದುರ್ಬಲವಾಗಿರುವ ಈ ಸಂದರ್ಭದಲ್ಲಿ ಅವರನ್ನು ಮೇಲಕ್ಕೆತ್ತುವ ಕೆಲಸ ಆಗಿಲ್ಲ. ರೈತರಿಗೆ, ಕೂಲಿಕಾರ್ಮಿಕರಿಗೆ, ಮಹಿಳೆಯರಿಗೆ, ಯುವಜನರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಈ ಬಜೆಟ್ ಏನನ್ನು ನೀಡಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗ 2% ಕ್ಕಿಂತ ಕಡಿಮೆಯಿದ್ದು, ಇದು ಘೋಷಣೆಗಳ ಮತ್ತು ಕೇವಲ ಪ್ರಚಾರದ ಬಜೆಟ್ ಆಗಿದೆ. ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love