ಘೋಷಣೆಗಷ್ಟೇ ಸೀಮಿತವಾದ ಚುನಾವಣಾ ಬಜೆಟ್ – ಅಶೋಕ್ ಕುಮಾರ್ ಕೊಡವೂರು

Spread the love

ಘೋಷಣೆಗಷ್ಟೇ ಸೀಮಿತವಾದ ಚುನಾವಣಾ ಬಜೆಟ್ – ಅಶೋಕ್ ಕುಮಾರ್ ಕೊಡವೂರು

ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ಚುನಾವಣಾ ಬಜೆಟ್ ಆಗಿದ್ದು ಬಜೆಟ್ ನ ಭರವಸೆಗಳು ಘೋಷಣೆಗೆ ಸೀಮಿತವಾಗಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.

ಸರಕಾರ ಬಜೆಟ್ ಗಾತ್ರವನ್ನು 3 ˌ09,182 ಕೋಟಿ ರೂ ಗೆ ಏರಿಸಿದರೂ ಯೋಜನೆಗಳ ಅನುಷ್ಠಾನದಲ್ಲಿ ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ ˌ ಚುನಾವಣೆ ಹಿನ್ನಲೆಯಲ್ಲಿ ಅನುದಾನವನ್ನು ವಿವಿಧ ಇಲಾಖೆಗಳಿಗೆ ವಿಂಗಡಿಸಿ ಸರಕಾರ ಭರವಸೆಗಳ ಸುರಿಮಳೆಗೈದರೂ ˌಈ ಅನೈತಿಕ ಸರಕಾರವನ್ನು ಜನತೆ ಕಿತ್ತೋಗೆಯಲು ನಿರ್ಧರಿಸಿರುವುದರಿಂದ ಬಜೆಟ್ ನ ಭರವಸೆಗಳು ಘೋಷಣೆಗೆ ಸೀಮಿತವಾಗಲಿದೆ ˌಇದಕ್ಕೆ ಹೆಚ್ಚಿನ ಮಹತ್ವವಿಲ್ಲ ಎಂದು ಅವರು ಹೇಳಿದ್ದಾರೆ


Spread the love