
ಚರಣ್ ರಾಜ್ ಕೊಲೆ ಪ್ರಕರಣ – ಮೂವರು ಪೊಲೀಸ್ ವಶಕ್ಕೆ
ದಿನಾಂಕ 04-06-2022 ರಂದು 17-30 ಗಂಟೆಗೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪರ್ಲಂಪ್ಪಾಡಿ ಎಂಬಲ್ಲಿ ಚರಣ್ ರಾಜ್ ಎಂಬವರನ್ನು ಕಿಶೋರ್ ಪುಜಾರಿ ಮತ್ತು ಇತರರ ತಂಡ ತಲವಾರು ಮತ್ತು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು ಈ ಸಂಬಂದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 49/2022 ಕಲಂ 302 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಇದೊಂದು ಪೂರ್ವದ್ವೇಷದಿಂದ ಮಾಡಿರುವ ಕೊಲೆಯಾಗಿರುತ್ತದೆ. ಈ ಹಿಂದೆ ಮೃತ ಚರಣ್ ರಾಜ್ ತನ್ನ ಸಹಚರರೊಂದಿಗೆ ಸೇರಿಕೊಂಡು ಸಂಪ್ಯ ಬಳಿ ಕಾರ್ತಿಕ್ ಮಾರ್ಲ ಎಂಬವರನ್ನು ಕೊಲೆ ಮಾಡಿದ್ದು ಪ್ರಸ್ತುತ ಜಾಮೀನಿನಲ್ಲಿ ಬಿಡುಗಡೆಗೊಂಡು ಪರ್ಲಂಪ್ಪಾಡಿಯಲ್ಲಿ ಹೊಸದಾಗಿ ತೆರೆಯಲಿರುವ ಮೆಡಿಕಲ್ ಶಾಪ್ ಕೆಲಸಕ್ಕೆ ಓಡಾಡಿಕೊಂಡಿದ್ದ ವೇಳೆ ಆರೋಪಿತರುಗಳು ಹೊಂಚುಹಾಕಿ ಕೊಲೆ ಮಾಡಿರುವುದಾಗಿದೆ.
ಸದ್ರಿ ಪ್ರಕರಣದ ಪತ್ತೆ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಸೋನಾವನ ಋಷಿಕೇಶ್ ಭಗವಾನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರ್ ಚಂದ್ರ ಹಾಗು ಮಾನ್ಯ ಪೊಲೀಸ್ ಐಪಿಎಸ್ ಉಪಾಧೀಕ್ಷಕರಾದ ಕು. ಗಾನಾ.ಪಿ.ಕುಮಾರ್ ರವರು ಸೂಚನೆಯಂತೆ ಶ್ರೀ ನವೀನ್ ಚಂದ್ರ ಜೋಗಿ, ಪೊಲೀಸ್ ವೃತ್ತ ನಿರೀಕ್ಷಕರು, ಸುಳ್ಯ ವೃತ್ತ. ಶ್ರೀ ರುಮ್ಮ ನಾಯ್ಕ ಪಿ ಎಸ್ ಐ ಬೆಳ್ಳಾರೆ, ಶ್ರೀ ಉದಯರವಿ ಪಿ ಎಸ್ ಐ ಪುತ್ತೂರು ಗ್ರಾಮಾಂತರ, ರವರ ನೇತ್ರತ್ವದಲ್ಲಿ ವಿವದ ತಂಡಗಳನ್ನು ರಚಿಸಿ ಪತ್ತೆಗೆ ಪ್ರಯತ್ನಿಸಲಾಗಿತ್ತು.
ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿಯನ್ನು ಪಡೆದು ಶ್ರೀ ರುಕ್ಕ ನಾಯ್ಕ ಪಿ ಎಸ್ ಐ ಬೆಳ್ಳಾರ ಶ್ರೀ ಉದಯರವಿ ಪಿ ಎಸ್ ಐ ಪುತ್ತೂರು ಗ್ರಾಮಾಂತರ, ರವರವ ನೇತ್ರತ್ವದ ತಂಡಗಳು ಆರೋಪಿಗಳ ಪೈಕಿ 1) ನರ್ಮಶ್ ರೈ(29) 2) ನಿತಿಲ್ ಶೆಟ್ಟಿ (23) 3) ವಿಜೇಶ್ (22) ಎಂಬವರುಗಳನ್ನು ಈ ದಿನ ದಿನಾಂಕ 5-6-2022 ರಂದು ಪುತ್ತೂರು ತಾಲೂಕು ಕೆಯ್ಯರು ಗ್ರಾಮದ ಪಲ್ಲತ್ತಡ್ಕ ಎಂಬಲ್ಲಿಂದ ವಶಕ್ಕೆ ಪಡೆದುಕೊಂಡಿರುವುದಾಗಿದೆ. ಪ್ರರಕಣದಲ್ಲಿ ತನಿಖೆ ಮುಂದುವರೆದಿದ್ದು ಉಳಿದ ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ.