ಚರ್ಚೆಗೆ ಗ್ರಾಸವಾದ ಅರ್ಚಕರ ಪ್ರಾರ್ಥನೆ: ಮುಖ್ಯಮಂತ್ರಿ ಹುದ್ದೆಗಾಗಿ ಕೊಲ್ಲೂರಿನಲ್ಲಿ ಡಿಕೆಶಿ ಚಂಡಿಕಾಯಾಗ?

Spread the love

ಚರ್ಚೆಗೆ ಗ್ರಾಸವಾದ ಅರ್ಚಕರ ಪ್ರಾರ್ಥನೆ: ಮುಖ್ಯಮಂತ್ರಿ ಹುದ್ದೆಗಾಗಿ ಕೊಲ್ಲೂರಿನಲ್ಲಿ ಡಿಕೆಶಿ ಚಂಡಿಕಾಯಾಗ?

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಚಂಡಿಕಾಯಾಗ ಪೂರ್ಣಾಗುತಿ ವೇಳೆ ಡಿಕಿಶಿ ಪರ ಅರ್ಚಕರು ಸಲ್ಲಿಸಿದ ಪ್ರಾರ್ಥನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ‌.

ಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಡಿ.ಕೆ.ಶಿವಕುಮಾರ್ ಅವರಿಗೆ ‘ಮುಖ್ಯಮಂತ್ರಿ ಹುದ್ದೆ ಪ್ರಾಪ್ತಿಯಾಗಲಿ’ ಎಂದು ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು. ನಂತರ ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ನಾನು ರಾಜಕಾರಣಿ, ಖಾವಿ ಬಟ್ಟೆ ಹಾಕಿಕೊಂಡಿಲ್ಲ; ಬಿಳಿ ಬಟ್ಟೆ ಹಾಕಿದ್ದೇನೆ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.

‘ಒಳ್ಳೆಯ ಕೆಲಸ, ಹೋರಾಟ, ಯುದ್ಧ ಮಾಡಬೇಕಾದರೆ ದೇವರ ಅನುಗ್ರಹ ಮುಖ್ಯ. ಹಾಗಾಗಿ, ಕೊಲ್ಲೂರು ಮೂಕಾಂಬಿಕೆ, ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಮಾಡಿದ್ದೇನೆ’ ಎಂದರು.

ಈ ಬಾರಿ ಕರಾವಳಿಯಲ್ಲಿ ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿಗೆ ಹಿಂದುತ್ವ ಫಲ ಕೊಡುವುದಿಲ್ಲ ಎಂದರು.’


Spread the love