ಚರ್ಚ್‌ ಹಬ್ಬಕ್ಕೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನ ಸ್ಕಿಡ್‌ ಆಗಿ ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಸಾವು

Spread the love

ಚರ್ಚ್‌ ಹಬ್ಬಕ್ಕೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನ ಸ್ಕಿಡ್‌ ಆಗಿ ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಸಾವು

ಉಡುಪಿ: ಕೋಟ ಚರ್ಚ್‌ ಹಬ್ಬಕ್ಕೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನ ಸ್ಕಿಡ್‌ ಆಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತರಾಗಿದ್ದಾರೆ.

ಮೃತ ಮಹಿಳೆಯನ್ನು ಉದ್ಯಾವರ ನಿವಾಸಿ ಅನಿಲ್‌ ಕಿರಣ್‌ ಪಿಂಟೊ ಅವರ ಪತ್ನಿ ಸರಿತಾ ಪಿಂಟೊ (38) ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಸೋಮವಾರ ಅನಿಲ್‌ ಕಿರಣ್‌ ಪಿಂಟೊ ಅವರು ತನ್ನ ಹೋಂಡಾ ಅಕ್ಟೀವಾ ವಾಹನದಲ್ಲಿ ತನ್ನ ಪತ್ನಿ ಸರಿತಾ ಹಾಗೂ ಮಗ ಅಡ್ರೀಲ್‌ ನನ್ನು ಕುಳ್ಳಿರಿಸಿಕೊಂಡ ಕೋಟದಲ್ಲಿನ ತನ್ನ ಅತ್ತೆ ಮನೆಗೆ ಚರ್ಚ್‌ ಹಬ್ಬದ ಪ್ರಯುಕ್ತ ತೆರಳುತ್ತಿದ್ದ ವೇಳೆ ಬ್ರಹ್ಮಾವರ ಹೇರೂರು ಬಳಿ ವಾಹನ ಸ್ಕೀಡ್‌ ಆದ ಪರಿಣಾಮ ಸರಿತಾ ಅವರು ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love