ಚಳಿಗಾಲ ಅಧಿವೇಶನ: ಮತ್ಸ್ಯಾಶ್ರಯ ಯೋಜನೆಯ ಅನುದಾನ‌ ಏರಿಕೆಗೆ ಶಾಸಕ‌ ಹಾಲಾಡಿ ಆಗ್ರಹ

Spread the love

ಚಳಿಗಾಲ ಅಧಿವೇಶನ: ಮತ್ಸ್ಯಾಶ್ರಯ ಯೋಜನೆಯ ಅನುದಾನ‌ ಏರಿಕೆಗೆ ಶಾಸಕ‌ ಹಾಲಾಡಿ ಆಗ್ರಹ

ಬೆಳಗಾವಿ: ಮತ್ಸ್ಯಾಶ್ರಯ ಯೋಜನೆಯಲ್ಲಿ ಮೀನುಗಾರ ಕುಟುಂಬಗಳಿಗೆ ನೀಡಲಾಗುವ ಮನೆ ನಿರ್ಮಾಣದ ವೆಚ್ಚ ಯಾವುದಕ್ಕೂ ಸಾಲುವುದಿಲ್ಲ ಮುಂದಿನ ಬಜೆಟ್ ನಲ್ಲಿ ಇದನ್ನು ಕನಿಷ್ಠ ಮೂರು ಲಕ್ಷ ರೂಪಾಯಿಗಳಿಗೆ ಏರಿಸುವಂತೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬೆಳಗಾವಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಕಳೆದ ಮೂರು ವರ್ಷಗಳಿಂದ ಮತ್ಸ್ಯಾಶ್ರಯ ಯೋಜನೆಯಲ್ಲಿ ಮೀನುಗಾರ ಕುಟುಂಬಗಳಿಗೆ ಮನೆಗಳ ಹಂಚಿಕೆ ನಡೆದಿಲ್ಲ. ಆದರೆ ಈಗ 5000 ಮನೆಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದ್ದು, ಒಂದು ಮನೆಯ ವೆಚ್ಚ ರೂ1.20 ಲಕ್ಷ ಆಗಿದ್ದು ಇದು ಕನಿಷ್ಠ ಪಚಾಂಗ ನಿರ್ಮಿಸಲು ಕೂಡ ಸಾಕಾಗುವುದಿಲ್ಲ. ಸರಕಾರ 8% ಇದ್ದ ಜಿಎಸ್ ಟಿಯನ್ನು 18% ಮಾಡಿದೆ, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಆದ್ದರಿಂದ ಮುಂದಿನ ಬಜೆಟಿನಲ್ಲಿ ಅದರ ವೆಚ್ಚವನ್ನು ಕನಿಷ್ಠ ರೂ 3 ಲಕ್ಷಕ್ಕೆ ಏರಿಸುವಂತೆ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಮೀನುಗಾರಿಕಾ ಸಚಿವ ಎಸ್ ಅಂಗಾರ ಅವರು ಈ ಬಗ್ಗೆ ವಸತಿ ಸಚಿವ ಸೋಮಣ್ಣ ಅವರ ಜೊತೆಗೂಡಿ ಮುಖ್ಯಮಂತ್ರಿಗಳಲ್ಲಿ ಚರ್ಚೆ ನಡೆಸುವುದಾಗಿ ಹೇಳಿದರು.

ಹಾಲಾಡಿಯವರ ಪ್ರಶ್ನೆಗೆ ದನಿಗೂಡಿಸಿದ ಸಭಾಧ್ಯಕ್ಷ ಕಾಗೇರಿಯವರು ಸದ್ಯ ಚುನಾವಣೆ ಹತ್ತಿರ ಬರುತ್ತಿದ್ದು ಚುನಾವಣಾ ಪ್ರಣಾಳಿಕೆಯಲ್ಲಿ ಕೂಡ ಇದನ್ನು ಸೇರಿಸದರೆ ಉಪಯೋಗವಾಗುತ್ತದೆ ಎಂದರು ಇದಕ್ಕೆ ಹಾಲಾಡಿಯವರು ಕೂಡ ಸಹಮತ ವ್ಯಕ್ತಪಡಿಸಿದರು.


Spread the love