ಚಾತುರ್ಮಾಸ ಸಮಾಪನ: ತಾಯಿಯ ಋಣ ತೀರಿಸಲಸಾಧ್ಯ – ಕಾಶೀ ಮಠಾಧೀಶರು

Spread the love

ಚಾತುರ್ಮಾಸ ಸಮಾಪನ ಮಂಗಳ ಸಭಾ ತಾಯಿಯ ಋಣ ತೀರಿಸಲಸಾಧ್ಯ : ಕಾಶೀ ಮಠಾಧೀಶರು

ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ಆಚರಿಸಿದ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಬುಧವಾರ ಶ್ರೀ ದೇವಳದ ವತಿಯಿಂದ ದೇವಳದ ರಾಜಾಂಗಣದಲ್ಲಿ ಶ್ರೀ ಸುಧೀಂದ್ರ ಸಭಾ ಮಂಟಪದಲ್ಲಿ ಆಯೋಜಿಸಿದ ಮಂಗಳ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು .

ನಮ್ಮ ಗುರುಗಳು ತಿಳಿಸಿದಂತೆ ನಮ್ಮ ಸಮಾಜ ಎಂದರೆ ನಮ್ಮ ಮಕ್ಕಳಂತೆ ನಾವು ತಮಗೆಲ್ಲರಿಗೂ ಪ್ರೀತಿಯಿಂದ ಆಶೀರ್ವದಿಸುತ್ತೇವೆ . ನಮಗೆ ಮಠಗಳು , ಗುರುಗಳು ಯಾಕೆಬೇಕು ಧರ್ಮದ ಬಗ್ಗೆ , ಧರ್ಮಾಚರಣೆ ಅನುಸರಿಸಲು ಸಮಾಜ ಉದ್ದಾರ ಮಾಡಲು , ನಮ್ಮ ದೋಷ ನಿವೃತ್ತಿಗಾಗಿ ಧರ್ಮ ಪೀಠವಿರುವುದು. ಮನೆಯಲ್ಲಿರುವ ತಂದೆ ತಾಯಂದಿರ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರ ಸೇವೆ ಸಲ್ಲಿಸಿ ನಮ್ಮ ಶಾಸ್ತ್ರದಲ್ಲಿ ತಿಳಿಸಿದಂತೆ ಮಾತೃ ಋಣ , ಗುರು ಋಣ ತೀರಿಸಲಸಾದ್ಯ , ತಾಯಿಯಬಗ್ಗೆ ವಿಶೇಷ ಕಾಳಜಿ ವಹಿಸಿ ಅವರನ್ನು ಉತ್ತಮ ರೀತಿಯಲ್ಲಿ ಲಾಲನೆ , ಪಾಲನೆ ಮಾಡಿ .

ಚಾತುರ್ಮಾಸ ಸಂದರ್ಭದಲ್ಲಿ ಹಲವಾರು ಅಬಾಲ ವೃದ್ಧ ಸ್ತ್ರಿ ಪುರುಷರು ಸೇವೆ ಸಲ್ಲಿಸಿದ್ದಾರೆ . ತಮಗೆ ನೀಡಿರುವ ಜವಾಬ್ದಾರಿ ಸೂಕ್ತ ರೀತಿಯಲ್ಲಿ ನಡೆದುಕೊಳ್ಳಬೇಕು , ನೀಡಿರುವ ಜವಾಬ್ಧಾರಿ ನಮ್ಮ ಕರ್ತವ್ಯ ಎಂದು ನಿಭಾಯಿಸಬೇಕು. ನಿಸ್ವಾರ್ಥ ರೂಪದಲ್ಲಿ ಸೇವೆ ಸಲ್ಲಿಸಿದರೆ ದೇವರು ಎಂದೆಂದಿಗೂ ಕೈ ಬಿಡಲಾರ ಇದು ಸತ್ಯ . ದೇವರ ಹಾಗೂ ಗುರುಗಳ ಸೇವೆ ಮಾಡುವುದರಿಂದ ನಿಮ್ಮೆಲ್ಲರ ಜೀವನ ಸಫಲವಾಗಲಿ , ಸಮಾಜ ವಿಶೇಷ ಅಭಿವ್ರದ್ದಿಯಾಗಲಿ ಎಂದು ಸಂಸ್ಥಾನದ ಆರಾಧ್ಯ ದೇವರಾದ ವ್ಯಾಸರಘುಪತಿ ನರಸಿಂಹ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಆಶೀರ್ವದಿಸಿದರು .

ಮಂಗಳ ಸಭಾಕಾರ್ಯಕ್ರಮದಲ್ಲಿ ಚಾತುರ್ಮಾಸ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸಮಾಜ ಬಾಂಧವರಿಗೆ ಶ್ರೀಗಳವರ ದಿವ್ಯಹಸ್ತಗಳಿಂದ ವಿಶೇಷ ಸೇವಾ ಪ್ರಸಾದ ನೀಡಿ ಪುರಸ್ಕರಿಸಲಾಯಿತು .

ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ ಸ್ವಾಗತಿಸಿದರು . ದೇವಳದ ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯ ಪ್ರಾಸ್ತಾವಿಕ ಭಾಷಣ ನಡೆಸಿದರು . ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ , ಕೊಡುಗೈ ದಾನಿ ಬೆಂಗಳೂರಿನ ಪಿ . ದಯಾನಂದ ಪೈ , ಚಾತುರ್ಮಾಸ ಸಮಿತಿಯ ಗೌರವ ಅಧ್ಯಕ್ಷ ಮುಂಡ್ಕುರ್ ರಾಮದಾಸ್ ಕಾಮತ್ , ಅಧ್ಯಕ್ಷ ಎಂ . ಪದ್ಮನಾಭ ಪೈ , ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಕೆ . ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ , ಮುಖ್ಯ ಸಂಯೋಜಕ ಸುರೇಶ್ ವಿ ಕಾಮತ್ , ಬಿ . ಆರ್ ಭಟ್ , ಉಳ್ಳಾಲ್ ನಾಮದೇವ್ ಮಲ್ಯ , ಗುರುದತ್ ಕಾಮತ್ , ಕೆ ಪಿ ಪ್ರಶಾಂತ್ ರಾವ್ ಉಪಸ್ಥಿತರಿದ್ದರು . ತೋನ್ಸೆ ಗಣಪತಿ ಪೈ ಕಾರ್ಯಕ್ರಮ ನೀರೂಪಿಸಿದರು .


Spread the love