ಚಾಮರಾಜನಗರದಲ್ಲಿ ಕಣ್ಮನ ಸೆಳೆಯುತ್ತಿರುವ ಕೆರೆ-ಜಲಾಶಯಗಳು

Spread the love

ಚಾಮರಾಜನಗರದಲ್ಲಿ ಕಣ್ಮನ ಸೆಳೆಯುತ್ತಿರುವ ಕೆರೆ-ಜಲಾಶಯಗಳು

ಚಾಮರಾಜನಗರ: ಚಾಮರಾಜನಗರದಲ್ಲಿ ಸುರಿದ ಮಳೆ ಅಬ್ಬರಕ್ಕೆ ಕೆರೆಕಟ್ಟೆಗಳು, ಜಲಾಶಯಗಳು ತುಂಬಿ ಹರಿದಿದ್ದು, ಇದುವರೆಗೆ ಭರ್ತಿಯಾಗದ ಕೆರೆ, ಜಲಾಶಯಗಳು ಬರೀ ಭರ್ತಿಯಾಗಿದ್ದು ಮಾತ್ರವಲ್ಲದೆ, ತುಂಬಿ ಹರಿದ ಪರಿಣಾಮ ಬಹುತೇಕ ಜಮೀನುಗಳು ಜಲಾವೃತವಾಗಿವೆ. ಆದರೆ ಭರ್ತಿಯಾಗಿರುವ ಜಲಾಶಯ, ಕೆರೆಗಳ ನೋಟ ಕಣ್ಮನ ಸೆಳೆಯುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಸುರಿಯುತ್ತಿರುವ ಮಳೆ ಚಾಮರಾಜನಗರದಲ್ಲಿ ಬತ್ತಿಹೋಗಿದ್ದ ಕೆರೆಕಟ್ಟೆಗಳಿಗೆ ಜೀವತುಂಬಿದೆ. ಭರ್ತಿಯಾಗಿರುವ ಜಲಾಶಯ, ಕೆರೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ. ಜತೆಗೆ ಅಂತರ್ಜಲ ಹೆಚ್ಚಾಗಿ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ.

ಹಾಗೆನೋಡಿದರೆ ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಸುರಿಯುವ ಮಳೆಯ ನೀರನ್ನು ಹಿಡಿದಿಟ್ಟು ಬೇಸಿಗೆಯಲ್ಲಿ ಜನಜಾನುವಾರುಗಳಿಗೆ ನೀರೊದಗಿಸುತ್ತಿದ್ದ ಕೆರೆಗಳು ನಂತರ ವರ್ಷಗಳಲ್ಲಿ ಅವುಗಳ ನಿರ್ಲಕ್ಷ್ಯದಿಂದಾಗಿ ಹೂಳು ತುಂಬಿ ಮಳೆ ಕಡಿಮೆಯಾಗಿದ್ದರಿಂದ ಬಹುತೇಕ ಕೆರೆಗಳು ನೀರಿಲ್ಲದೆ ಬರಡಾಗಿದ್ದವು. ಆದರೆ ಕೆಲವು ವರ್ಷಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಅವುಗಳೆಲ್ಲವೂ ಭರ್ತಿಯಾಗುತ್ತಿರುವುದು ರೈತರಿಗೊಂದು ವರದಾನವಾಗಿದೆ. ಆದರೆ ಇದೀಗ ಸುರಿಯುತ್ತಿರುವ ಭಾರೀ ಮಳೆ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಮಳೆಯಿಂದ ಈ ಬಾರಿ ಬೆಳೆಗೆ ಒಂದಷ್ಟು ಸಮಸ್ಯೆಯಾದರೂ ಮುಂದಿನ ವರ್ಷಗಳಲ್ಲಿ ಅಂತರ್ಜಲ ವೃದ್ಧಿಯಾಗುವ ಖುಷಿ ರೈತರಲ್ಲಿದೆ ಎಂದರೆ ತಪ್ಪಾಗಲಾರದು.

ಭರ್ತಿಯಾಗಿರುವ ಕೆರೆ ಮತ್ತು ಜಲಾಶಯವನ್ನು ನೋಡಲು ಸುತ್ತಮುತ್ತಲಿನ ಜನ ಆಗಮಿಸುತ್ತಿದ್ದಾರೆ. ಕೆರೆ ತುಂಬಿ ನೀರು ಧುಮ್ಮಿಕ್ಕುವ ದೃಶ್ಯ ಸುಂದರ ಜಲಪಾತವೊಂದನ್ನು ಸೃಷ್ಠಿ ಮಾಡಿದ್ದು, ಅದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತಿದೆ. ಈಗ ಕೆರೆ ತುಂಬಿ ಹೆಚ್ಚುವರಿ ನೀರು ಹರಿದು ಹೋಗುತ್ತಿರುವುದರಿಂದ ಕೆರೆಯ ಕೆಳಭಾಗದ ಜಮೀನಿಲ್ಲಿ ಬೆಳೆ ಬೆಳೆದಿರುವ ರೈತರಿಗೆ ಫಸಲು ಕಳೆದುಹೋಗುವ ಭಯ ಶುರುವಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಇನ್ನಷ್ಟು ಹಾನಿಯಾಗುವ ಎಲ್ಲ ಸಾಧ್ಯತೆಗಳಿವೆ.


Spread the love

Leave a Reply

Please enter your comment!
Please enter your name here