ಚಾಮರಾಜನಗರದ ಎಂ.ಜಿ ದೊಡ್ಡಿ ಗ್ರಾಮದಲ್ಲಿ ಕೊರೊನಾ ಆತಂಕ

Spread the love

ಚಾಮರಾಜನಗರದ ಎಂ.ಜಿ ದೊಡ್ಡಿ ಗ್ರಾಮದಲ್ಲಿ ಕೊರೊನಾ ಆತಂಕ

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿದ್ದರೂ ಕೆಲವರ ನಿರ್ಲಕ್ಷ್ಯದಿಂದಾಗಿ ಹನೂರು ತಾಲ್ಲೂಕಿನ ಎಂ.ಜಿ ದೊಡ್ಡಿ ಗ್ರಾಮದ ಕಂಟೈನ್ಮೆಂಟ್ ಜೋನ್ ಆಗಿದ್ದು, ಇಲ್ಲಿನ 35 ಮಂದಿಗ ಇದೀಗ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ವಾರ ತಮಿಳುನಾಡಿನಲ್ಲಿ ನಡೆಯುವ ಮದುವೆಗೆ ತೆರಳಿ ಗ್ರಾಮಕ್ಕೆ ವಾಪಸ್ಸಾಗಿದ್ದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಎಂ.ಜಿ ದೊಡ್ಡಿ ಗ್ರಾಮದ 35 ಮಂದಿಗೆ ಕೋರೊನಾ ಸೋಂಕು ದೃಡವಾಗಿದ್ದು, ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಿದ್ದು, ಸೋಂಕಿತರನ್ನು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಗ್ರಾಮದ ನೂರಕ್ಕೂ ಹೆಚ್ಚು ಮಂದಿ ಕೆಲವು ದಿನಗಳ ಹಿಂದೆ ತಮಿಳುನಾಡಿನಲ್ಲಿ ನಡೆಯುವ ಮದುವೆಗೆ ತೆರಳಿದ್ದು, ಅಲ್ಲಿಂದ ಗ್ರಾಮಕ್ಕೆ ವಾಪಸ್ಸಾಗಿದ್ದರು. ಬಂದವರನ್ನು ಕೋವಿಡ್ ಸೋಂಕು ಪರೀಕ್ಷೆಗೆ ಒಳಪಡಿಸಿದಾಗ 35 ಮಂದಿಗೆ ಕೋರೊನಾ ಸೋಂಕು ದೃಢವಾಗಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಸೋಂಕಿತರನ್ನು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಡೀ ಗ್ರಾಮವನ್ನು ಸ್ಯಾನಟೈಸ್ ಮಾಡಲಾಗಿದ್ದು, ಗ್ರಾಮದ ನಿವಾಸಿಗಳೆಲ್ಲರನ್ನು ಕೋವಿಡ್ ಪರೀಕ್ಷೆ ಒಳಪಡಿಸಲಾಗಿದೆ. ಗ್ರಾಮಕ್ಕೆ ತಹಸೀಲ್ದಾರ್ ನಾಗರಾಜು ಗ್ರಾಮಕ್ಕೆ ಆರೋಗ್ಯಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಲ್ಲಿ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗಿದೆ.


Spread the love