ಚಾಮರಾಜನಗರ:  ರೈಲಿಗೆ ಸಿಲುಕಿ ಯುವಕ ಸಾವು

Spread the love

ಚಾಮರಾಜನಗರ:  ರೈಲಿಗೆ ಸಿಲುಕಿ ಯುವಕ ಸಾವು

ಚಾಮರಾಜನಗರ: ಯುವಕನೊಬ್ಬ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದ ಮರಿಯಾಲ ಬೇಡರಪುರ ನಡುವೆ ಇರುವ ರೈಲ್ವೆ ಹಳಿಯಲ್ಲಿ ನಡೆದಿದೆ.

ಚಾಮರಾಜನಗರ ತಾಲ್ಲೂಕು ಬದನಗುಪ್ಪೆ ಗ್ರಾಮದ ರಘು (22) ಎಂಬ ಯುವಕನೇ ರೈಲಿಗೆ ಸಿಲುಕಿ ಸಾವನ್ನಪ್ಪಿದ ದುರ್ದೈವಿ. ಈತ ತನ್ನ ತಾಯಿಯೊಂದಿಗೆ ವಾಸವಾಗಿದ್ದನು. ಇವರ ಜಮೀನು ಕೈಗಾರಿಕೆ ಬಡಾವಣೆಗೆ ಸೇರ್ಪಡೆ ಗೊಂಡಿತ್ತು. ಅದಕ್ಕಾಗಿ ಬರಬೇಕಾಗಿದ್ದ ಪರಿಹಾರ ಸರಿಯಾಗಿ ಬಂದಿರಲಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಬೇಸರಗೊಂಡಿದ್ದನು ಎನ್ನಲಾಗಿದೆ.

ಆದರೆ ಸಾವಿಗೆ ಖಚಿತ ಕಾರಣಗಳು ಇನ್ನೂ ಕೂಡ ತಿಳಿದು ಬಂದಿಲ್ಲ. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love