ಚಾಮರಾಜನಗರ ವೃತ್ತಿ ನಿರತ ಪತ್ರಕರ್ತರಿಗೆ ಲಸಿಕೆ ಅಭಿಯಾನ

Spread the love

ಚಾಮರಾಜನಗರ ವೃತ್ತಿ ನಿರತ ಪತ್ರಕರ್ತರಿಗೆ ಲಸಿಕೆ ಅಭಿಯಾನ

ಚಾಮರಾಜನಗರ: ವಾರ್ತಾ ಇಲಾಖೆ ಆಯೋಜಿಸಿದ್ದ ವೃತ್ತಿನಿರತ ಪತ್ರಕರ್ತರಿಗೆ ಲಸಿಕೆ ಶಿಬಿರ ಯಶಸ್ವಿ ಯಾಗಿ ನಡೆಯಿತು.

ಚಾಮರಾಜನಗರ ಜಿಲ್ಲಾ ಆಡಳಿತ ಭವನದಲ್ಲಿರುವ ವಾರ್ತಾ ಇಲಾಖೆ ಸಭಾಂಗಣದಲ್ಲಿ ಬೆಳಗ್ಗೆಯಿಂದ ಪತ್ರಕರ್ತರಿಗೆ ಲಸಿಕೆ ಶಿಬಿರ ಏರ್ಪಡಿಸಲಾಗಿತ್ತು ಹಲವಾರು ಪತ್ರಕರ್ತರು ಆಗಮಿಸಿ ಪಡೆದುಕೊಂಡರು. ಲಸಿಕೆ ಅಭಿಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಪತ್ರಕರ್ತರ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಆರ್ ಸಿ ಎಚ್ ವಿಶ್ವೇಶ್ವರಯ್ಯ. ರವರಿಗೆ ಪತ್ರಕರ್ತ ಜಿ ಬಂಗಾರು, ಹರದನಹಳ್ಳಿ ರಹಮನ್ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್ ಸಿ ಎಚ್ ಡಾ.ವಿಶ್ವೇಶ್ವರಯ್ಯ, ಅತಿ ಶೀಘ್ರದಲ್ಲಿ. ವಾರ್ತಾ ಇಲಾಖೆ ಸಭಾಂಗಣದಲ್ಲಿ ಪತ್ರಕರ್ತರು ಹಾಗೂ ಕುಟುಂಬ ವರ್ಗದವರಿಗೆ ಲಸಿಕೆ ಹಮ್ಮಿಕೊಳ್ಳಲಾಗಿದೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಮಾತನಾಡಿ. ಪತ್ರಕರ್ತರು ದಿನನಿತ್ಯ ಸುದ್ದಿ ಮಾಡುವಲ್ಲಿ ಪ್ರಮುಖ ಆದ್ಯತೆ ಕೊಡುತ್ತಿದ್ದೀರಿ ಇದರ ಜೊತೆ ನಿಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರು ಜಯಶಂಕರ್. ಆರೋಗ್ಯ ಇಲಾಖೆ ಕಾರ್ಯಕರ್ತರು. ವಾರ್ತಾ ಇಲಾಖೆ ಸಿಬ್ಬಂದಿ ವರ್ಗ. ಹಾಜರಿದ್ದರು.


Spread the love