ಚಾರ್ಕೋಪ್ ಕನ್ನಡಿಗರ ಬಳಗದಿಂದ ಅಜೆಕಾರು ಕಲಾಭಿಮಾನಿ ಬಳಗದ ದ್ವಿತೀಯ ತಂಡದ ಸರಣಿ ತಾಳಮದ್ದಳೆಗಳ ಉದ್ಘಾಟನೆ 

Spread the love

ಚಾರ್ಕೋಪ್ ಕನ್ನಡಿಗರ ಬಳಗದಿಂದ ಅಜೆಕಾರು ಕಲಾಭಿಮಾನಿ ಬಳಗದ ದ್ವಿತೀಯ ತಂಡದ ಸರಣಿ ತಾಳಮದ್ದಳೆಗಳ ಉದ್ಘಾಟನೆ 

ಸನಾತನ ಧರ್ಮದ ಸಂಸ್ಕೃತಿ ಸಂಸ್ಕಾರಗಳನ್ನು ಜನಸಾಮಾನ್ಯರಿಗೆ ಭೋದಿಸುವ ಕೆಲಸ ಯಕ್ಷಗಾನ ತಾಳಮದ್ದಳೆಗಳು ಮಾಡುತ್ತಿವೆ.- ಮುಂಡಪ್ಪ ಯಸ್ ಪಯ್ಯಡೆ.

ಭಾರತದ ವೇದ, ಪುರಾಣ ಉಪನಿಷತ್ತು ಹಾಗೂ ವಿಶೇಷ ಮಹಾ ಕಾವ್ಯಗಳ ಆಧಾರಿತ ಯಕ್ಷಗಾನ ತಾಳಮದ್ದ ಳೆಯ ಅರ್ಥಗಾರಿಕೆಯು ಜನಸಾಮಾನ್ಯರ ಮೇಲೆ ಸಾಕಷ್ಟು ಪ್ರಭಾವ ಬೀರಿ, ಸಕಾರಾತ್ಮಕವಾಗಿ ಅವರ ಮನ ಪರಿವರ್ತಿಸುವ ಕೆಲಸ ಮಾಡುತ್ತಿವೆ. ಯಕ್ಷಗಾನ ತಾಳಮದ್ದಳೆಯಲ್ಲಿ ಬರುವ ಪ್ರತಿಯೊಂದು ವಿಷಯಗಳನ್ನು ಅಮೂಲಾಗ್ರವಾಗಿ ಚಿಂತನ ಮಂಥನ ನಡೆಸಿ ಅದರ ಆಳವನ್ನು ಸರಿಯಾಗಿ ಅರಿತುಕೊಂಡರೆ ಮನುಷ್ಯನ ಬದುಕಿಗೆ ಬೇಕಾದ ಎಲ್ಲಾ ರೀತಿಯ ನೀತಿಯ ಪಾಠಗಳು ಇದರಲ್ಲಿ ದೊರೆಯುತ್ತದೆ. ನಮ್ಮ ಜೀವನದಲ್ಲಿ ಯಕ್ಷಗಾನದಿಂದ ದೊರೆತ ನೀತಿ ಪಾಠಗಳನ್ನು ಅಳವಡಿಸಿಕೊಂಡರೆ ಜೀವನ ಸಾಕ್ಷಾತ್ಕಾರಗೊಳ್ಳಲು ಸಾಧ್ಯ ಎಂದು ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್ ಪಯ್ಯಡೆ ಅಭಿಪ್ರಾಯ ಪಟ್ಟರು. ಅವರು ಕಾಂದಿವಲಿ ಪಶ್ಚಿಮದ ಶಂಕರ್ ಲೇನ್ ನ ತಥಾಯಿ ಭಾಟಿಯಾ ಸಭಾಗ್ರಹದಲ್ಲಿ ಆಗಸ್ಟ್ 13 ರಂದು ಚಾರ್ಕೋಪ್ ಕನ್ನಡಿಗರ ಬಳಗ ಆಯೋಜಿಸಿದ ಅಜೆಕಾರು ಕಲಾಭಿಮಾನಿ ಬಳಗದ ಕಲಾವಿದರ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯಕ್ಷಗಾನದ ಅರ್ಥಗಾರಿಕೆಯಲ್ಲಿರುವ ತತ್ವಾದರ್ಶಗಳನ್ನು ಇಂದಿನ ಯುವಪೀಳಿಗೆ ಅರ್ಥೈಸಿಕೊಂಡು ಮುಂದುವರಿದರೆ ಅವರಲ್ಲಿ ಉತ್ತಮ ಸಂಸ್ಕಾರ ಬೆಳೆಯಲು ಸಾಧ್ಯ. ನಮ್ಮ ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ನಾವೆಲ್ಲರೂ ಪ್ರೋತ್ಸಾಹಿಸುವುದರ ಜೊತೆಗೆ ಚಾರ್ಕೋಪ್ ಕನ್ನಡಿಗರ ಬಳಗದ ಯಕ್ಷಗಾನ ಅಭಿಮಾನ ಪ್ರಸಂಶನೀಯ ಎಂದರು. ಕಾರ್ಯಕ್ರಮದಲ್ಲಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಹಿರಿಯ ಸಲಹೆಗಾರರಾದ ಪ್ರತಿಷ್ಟಿತ ಹೋಟೆೇಲು ಉದ್ಯಮಿ ಶ್ರೀ ಮನೋಹರ್ ಎನ್ ಶೆಟ್ಟಿ (ಕಲ್ಯಾ ಸರಕಾರಿ ಪ್ರಾಥಮಿಕ ಶಾಲಾ ಶತಮಾನೋತ್ಸವ ಮುಂಬಯಿ ಸಮಿತಿಯ ಅಧ್ಯಕ್ಷ್ಯರು) ಕಾರ್ಯಾಧ್ಯಕ್ಷರಾದ ನಿಟ್ಟೆ ಶ್ರೀ ಎಂ.ಜಿ.ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷ ಹಾಗೂ ಸಲಹೆಗಾರ ಶ್ರೀ ವಿಜಯ ಆರ್ ಭಂಡಾರಿ, ಮಾಜಿ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ,ಬೊರಿವಲಿ ಪರಿಸರದ ಹೋಟೇಲ್ ಉದ್ಯಮಿ ಹಾಗೂ ಕಲಾಪೋಷಕ ಹಿರಿಯರಾದ ಶ್ರೀ ಕೃಷ್ಣ ಶೆಟ್ಟಿಯವರು, ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಗೌ ಪ್ರ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ,ಕಲಾಪೋಷಕ ಉದ್ಯಮಿ ಬಜ್ಪೆ ಬಂಟರ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಪೆರಾರ, ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಶ್ರೀ ಪದ್ಮನಾಭ ಯಸ್ ಪಯ್ಯಡೆ, ಮಾಜಿ ಗೌ ಪ್ರ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ವರ್ಲಿ ಭಾರತ್ ಬೋರ್ಡಿಂಗ್ ಫಿಶ್ ಲ್ಯಾಂಡ್ ಹೋಟೆಲ್ ನ ಶ್ರೀ ದಯಾನಂದ ಶೆಟ್ಟಿ ಮಲಾಡ್, ಭಾರತ್ ಬ್ಯಾಂಕಿನ ನಿರ್ದೇಶಕ ಪ್ರೇಮ್ ನಾಥ್ ಕೋಟ್ಯಾನ್ ,ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಶ್ರೀ ಗಂಗಾಧರ ಎ ಶೆಟ್ಚಿ, ಜತೆ ಕೋಶಾಧಿಕಾರಿ ಶ್ರೀ ಅವಿನಾಶ್ ಯಂ ಶೆಟ್ಚಿ ಮಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಶಂಸನೆ ಗೈದರು.

ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಶ್ರೀ ಎಂ ಕೃಷ್ಣ ಎನ್ ಶೆಟ್ಟಿಯವರು ಮಾತನಾಡಿ ಗಣ್ಯರ ಸಹಕಾರದಿಂದ ಕಾಂದಿವಲಿ ಪರಿಸರದ ಮಧ್ಯಮ ವರ್ಗದ ಈ ಒಂದು ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಯಶಸ್ಸು ಸಾಧಿಸಿದೆ. ಈ ಮೂಲಕ ಬಳಗದ ಎಲ್ಲಾ ಸದಸ್ಯರಿಗೆ ನಾನು ಋಣಿಯಾಗಿದ್ದೇನೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಿದ ಇಂದಿನ ಈ ಕಾರ್ಯಕ್ರಮ ನಮ್ಮ ಬಳಗಕ್ಕೆ ಅತ್ಯಂತ ಮಹತ್ವದ್ದಾಗಿದೆ. ಸಾಂಘಿಕ ಶಕ್ತಿಯಿಂದ ದೇಶದ ಪ್ರಗತಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.
ಮಹಿಳಾ ವಿಭಾಗದ ಸದಸ್ಯೆಯರಾದ ರಜನಿ ಆರ್ ಶೆಟ್ಟಿ, ಜಯಲಕ್ಷ್ಮಿ ಪಿ ಶೆಟ್ಟಿ ಹಾಗೂ ತನುಜಾ ಯಂ ಭಟ್ ಪ್ರಾರ್ಥನೆ ಹಾಡಿದರು. ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಗದ ವತಿಯಿಂದ ಅತಿಥಿಗಳನ್ನು, ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಶ್ರೀ ಬಾಲಕೃಷ್ಣ ಶೆಟ್ಟಿಯವರನ್ನು ಹಾಗೂ ತಾಳಮದ್ದಳೆಯ ಕಲಾವಿದರೆಲ್ಲರನ್ನೂ ಗೌರವಿಸಲಾಯಿತು. ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಅಧ್ಯಕ್ಷರಾದ ಅಜೆಕಾರು ಶ್ರೀ ಬಾಲಕೃಷ್ಣ ಶೆಟ್ಟಿಯವರು ಚಾರ್ಕೋಪ್ ಕನ್ನಡಿಗರ ಬಳಗದ ಪದಾಧಿಕಾರಿಗಳಿಗೆ ಹಾಗೂ ಇತರ ಗಣ್ಯರಿಗೆ ಪುಷ್ಪಗೌರವವನ್ನಿತ್ತು ಗೌರವಿಸಿದರು

ಕಾರ್ಯಕ್ರಮದಲ್ಲಿ ಬಳಗದ ಟ್ರಸ್ಟಿ, ಜಯ ಸಿ ಶೆಟ್ಟಿ, ಭಾಸ್ಕರ ಸರಪಾಡಿ, ಸಲಹೆಗಾರರಾದ ಡಾ. ಯನ್ ಜಿ ಭಟ್, ಉಪಾಧ್ಯಕ್ಷ ಚಂದ್ರಶೇಖರ್ ಯಸ್ ಶೆಟ್ಟಿ, ಕೋಶಾಧಿಕಾರಿ ಗೌರಿ ಡಿ ಪಣಿಯಾಡಿ, ಜತೆ ಕೋಶಾಧಿಕಾರಿ ಲತಾ ವಿ ಬಂಗೇರ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಚೇವಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ ಶೆಟ್ಟಿ, ಸಲಹೆಗಾರರಾದ ಶಾಂತಾ ಯನ್ ಭಟ್ , ಸಮಿತಿ ಸದಸ್ಯರಾದ ಮಹೇಂದ್ರ ಕಾಂಚನ್, ಜಯ ಡೇವಾಡಿಗ, ಕರುಣಾಕರ ಕನ್ನರ್ಪಾಡಿ, ವನಜಾ ಡಿ ಶೆಟ್ಟಿ , ರಮೇಶ್ ಬಂಗೇರ, ರೂಪಾ ವಿ ಭಟ್ ಹಾಗೂ ಬಳಗದ ವಿವಿಧ ಸಮಿತಿಗಳ ಸದಸ್ಯ ಸದಸ್ಯೆಯೆರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗೂ ಕಲಾಪೋಷಕರಿಗೆ ಪುಷ್ಪ ಗೌರವವನ್ನಿತ್ತು ಗೌರವಿಸಲಾಯಿತು . ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಬಲು ಅಚ್ಚುಕಟ್ಚಾಗಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಸುಪ್ರಸಿದ್ದ ಕಲಾವಿದರಿಂದ ಸಂಪನ್ನಗೊಂಡ *ಯಾಗ ಸಂಕಲ್ಪ -ಮಾಗದ ವಧೆ* ಯಕ್ಷಗಾನ ತಾಳಮದ್ದಳೆಯ ಅಜೆಕಾರು ಅಭಿಮಾನಿ ಬಳಗದ ಕಲಾವಿದರನ್ನು ಹಿರಿಯ ಕಲಾವಿದರಾದ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿಯವರು ಪರಿಚಯಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಕಟೀಲು ಮೇಳದ ಖ್ಯಾತ ಯುವ ಭಾಗವತ ಶ್ರೀ ದೇವಿಪ್ರಸಾದ್ ಆಳ್ವ ತಲಪಾಡಿ, ಚೆಂಡೆಯಲ್ಲಿ ಹನುಮಗಿರಿ ಮೇಳದ ಶ್ರೀ ಸುಬ್ರಹ್ಮಣ್ಯ ಭಟ್ ದೇಲಂತಮಜಲು,ಮದ್ದಳೆಯಲ್ಲಿ ಪಾವಂಜೆ ಮೇಳದ ಮುಂಬಯಿಗರ ಚಿರಪರಿಚಿತ ಶ್ರೀ ಪ್ರಶಾಂತ್ ಶೆಟ್ಟಿ ವಗೆನಾಡು ಇವರು ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ, ಶ್ರೀ ಭಾಸ್ಕರ್ ರೈ ಕುಕ್ಕುವಳ್ಳಿ(ಧರ್ಮರಾಯ),ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಮಾಗಧ), ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ (ಶ್ರೀ ಕೃಷ್ಣ),ಶ್ರೀ ಸದಾಶಿವ ಆಳ್ವ ತಲಪಾಡಿ (ಭೀಮಸೇನ) ಹಾಗೂ ಶ್ರೀ ಪ್ರಸಾದ್ ಸವಣೂರು (ಅರ್ಜುನ) ಇವರು ತಮ್ಮ ಅದ್ಭುತ ವಾಕ್ಚಾತುರ್ಯದಿಂದ ಕೇಳುಗರನ್ನು ಮಂತ್ರಮುಗ್ದಗೊಳಿಸಿದರು.


Spread the love