ಚಾರ್ಟರ್ಡ್ ಅಕೌಂಟೆಂಟ್ ಘಟಿಕೋತ್ಸವ : 1500 ಮಂದಿಗೆ ಪದವಿ ಪ್ರದಾನ

Spread the love

ಚಾರ್ಟರ್ಡ್ ಅಕೌಂಟೆಂಟ್ ಘಟಿಕೋತ್ಸವ : 1500 ಮಂದಿಗೆ ಪದವಿ ಪ್ರದಾನ

ಬೆಂಗಳೂರು: ಚಾರ್ಟರ್ಡ್ ಅಕೌಂಟೆಂಟ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 1500 ಮಂದಿಗೆ ಪದವಿ ಪ್ರದಾನ ಘಟಿಕೋತ್ಸವ ಕಾರ್ಯಕ್ರಮ. ಬೆಂಗಳೂರು, ವಸಂತನಗರದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ದಿ ಇನಸ್ಟಿಟ್ಯೂಟ್ ಆಫ್ ಚಾರ್ಟಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ದೆಹಲಿ, ಕೊಲ್ಕತಾ, ಬೆಂಗಳೂರು, ಹೈದ್ರಾಬಾದ್ ಸಹಿತ ದೇಶಾದ್ಯಂತ ಏಕಕಾಲಕ್ಕೆ ಸಿಎ ಪದವಿ ಪ್ರಧಾನ ಘಟಿಕೋತ್ಸವ ಆಯೋಜಿಸಿ 20ಸಾವಿರ 500 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.

ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಉದ್ಯಮ ಖಾತೆ ಸಚಿವ ಪೀಯೂಸ್ ಗೋಯಲ್ ಅವರು ವರ್ಚುವಲ್ ಭಾಷಣದ ಮೂಲಕ ನೂತನ ಪದವಿದರರಿಗೆ ಶುಭಹಾರೈಸಿದರು ಹಾಗೂ ದೇಶದ ಆರ್ಥಿಕ ಪ್ರಗತಿಗೆ ಕೈಜೋಡಿಸುವ ಜೊತೆಗೆ ಭೃಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕುವ ಕಾರ್ಯದಲ್ಲಿ ನಿರಂತರ ಪ್ರಯತ್ನಶೀಲರಾಗುವಂತೆ ಕಿವಿ ಮಾತು ಹೇಳಿದರು.

ಅಖಿಲ ಭಾರತ ಮಟ್ಟದಲ್ಲಿ 10 ನೇ ರಾಂಕ್ ಪಡೆದ ಮಹಮ್ಮದ್ ತಬರೇಜ್, 28 ನೇ ರಾಂಕ್ ಪಡೆದ ಸೌರವ ಗುಪ್ತಾ, 36 ನೇ ರಾಂಕ್ ಪಡೆದ ಹಿಮಾಂಸು ಘೋಯಲ್, 38 ನೇ ರಾಂಕ್ ಪಡೆದ ತುಷಾಲ್ ಸುರಾಣಾ ಹಾಗೂ 44 ನೇ ರಾಂಕ್ ಪಡೆದ ಕುನಾಲ್ ರಾಥೋಡ್ ಅವರು ಚಿತ್ರದಲ್ಲಿ ಹಾಜರಿದ್ದಾರೆ.

ಎಫ್.ಕೆ.ಸಿ.ಸಿ.ಐ ಮಾಜಿ ಅಧ್ಯಕ್ಷ ಸಿಎ ಡಾ ಐ ಎಸ್ ಪ್ರಸಾದ್. ಭಾರತೀಯ ಲೆಕ್ಕಪರಿಶೋಧಕರ ಸಂಘ ಬೆಂಗಳೂರು. ಅಧ್ಯಕ್ಷ ಸಿಎ ಶ್ರೀನಿವಾಸ್ ಟಿ. ಕಾರ್ಯಕ್ರಮ ನಿರ್ದೇಶಕ ಹಾಗೂ ಕೇಂದ್ರ ಪರಿಷತ್ ಸದಸ್ಯ ಸಿಎ ಕೋಥಾಸ್ ಎಸ್ ಶ್ರೀನಿವಾಸ್ ಕಾರ್ಯದರ್ಶಿ ಪ್ರಮೋದ್.ಆರ್.ಹೆಗಡೆ, ಸಿಎ ಪನ್ನರಾಜ್ ಹಾಗೂ ಸಿಎ ಗೀತಾ ಎಬಿ ಅವರು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Spread the love