
ಚಿಕ್ಕಮಗಳೂರು: ದರೋಡೆಗೆ ಸಂಚು ಹಾಕುತ್ತಿದ್ದ 4 ಮಂದಿ ವಶ, 2 ಪಿಸ್ತೂಲ್, ಜೀವಂತ ಗುಂಡು, ಆಯುಧ ವಶ
ಚಿಕ್ಕಮಗಳೂರು: ದರೋಡೆಗೆ ಸಂಚು ಹಾಕುತ್ತಿದ್ದ ನಾಲ್ವರು ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದಿದ್ದು 2 ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಮಾರಣಾಂತಿಕ ಆಯುಧಗಳು ವಶಕ್ಕೆ ಪಡೆದಿದ್ದಾರೆ.
ಮೂಡಿಗೆರೆ ತಾಲೂಕು ಮುದ್ರೆ ಮನೆ ಬಸ್ ನಿಲ್ದಾಣದ ಹತ್ತಿರ ದರೋಡೆಗೆ ಸಂಚು ಹಾಕುತ್ತಿದ್ದ ವೇಳೆ 4 ಮಂದಿ ವೃತ್ತಿಪರ ಅಪರಾಧಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಲ್ಲಾ ಆರೋಪಿಗಳು ಡಕಾಯಿತಿ, ದರೋಡೆ, ಕೊಲೆಗೆ ಯತ್ನದಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಆರೋಪಿಗಳು ವಿವಿಧ ಕಾರಾಗೃಹಗಳಲ್ಲಿ ಪರಿಚಯವಾಗಿದ್ದು. ಉತ್ತರ ಪ್ರದೇಶದಿಂದ ಪಿಸ್ತೂಲ್ ಮತ್ತು ಗುಂಡು ಖರೀದಿಸಿ, ಇತ್ತೀಚಿಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ದರೋಡೆ ಮಾಡಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ತಿಳಿಸಿದ್ದಾರೆ.
ಆರೋಪಿಗಳಿಂದ 2 ಪಿಸ್ತೂಲ್, 2 ಜೀವಂತ ಗುಂಡು, ಮಾರಣಾಂತಿಕ ಆಯುಧಗಳು, ನಗದು ಮತ್ತು 2 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯ ಪೊಲೀಸ್ ತಂಡದಲ್ಲಿ ಸಿ.ಪಿ.ಐ. ಮೂಡಿಗೆರೆ ಸೋಮಶೇಖರ್ ಜೆ. ಸಿ., ಪಿ.ಎಸ್.ಐ. ಗಳಾದ ರವಿ ಜಿ. ಎ. ಮತ್ತು ಚಂದ್ರಶೇಖರ್ ಸಿ. ಎಲ್., ಪ್ರೋ. ಪಿ.ಎಸ್.ಐ. ಗಳಾದ ಬರ್ಮಪ್ಪ ಮತ್ತು ಮಂಜುನಾಥ, ಎ.ಎಸ್.ಐ. ಗಳಾದ ವೆಂಕಟೇಶ್ ಮೂರ್ತಿ ಮತ್ತು ತಿಮ್ಮಪ್ಪ ಹಾಗೂ ಸಿಬ್ಬಂದಿಗಳಾದ ಗಿರೀಶ್, ವಿಜಯ್ ಕುಮಾರ್, ದಯಾನಂದ್, ಚೇತನ್, ರುದ್ರೇಶ್ ಮತ್ತು ಪ್ರದೀಪ್ ಕುಮಾರ್ ರವರುಗಳು ಕಾರ್ಯನಿರ್ವಹಿಸಿರುತ್ತಾರೆ.
ಕಾರ್ಯಚರಣೆ ನಡೆಸಿದ ಪೊಲೀಸ್ ತಂಡಕ್ಕೆ ಡಿಜಿ ಮತ್ತು ಐಜಿಪಿ, ಕರ್ನಾಟಕ ರಾಜ್ಯ ರವರು ಒಂದು ಲಕ್ಷ ಬಹುಮಾನವನ್ನು ಘೋಷಿಸಿರುತ್ತಾರೆ.