ಚಿಕ್ಕಮಗಳೂರು:  ಮಗನ ಪಬ್​​ಜಿ ಹುಚ್ಚಿಗೆ ಅಮ್ಮ ಬಲಿ!

Spread the love

ಚಿಕ್ಕಮಗಳೂರು:  ಮಗನ ಪಬ್​​ಜಿ ಹುಚ್ಚಿಗೆ ಅಮ್ಮ ಬಲಿ!

ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಮಗನ ಪಬ್​​ಜಿ ಹುಚ್ಚಿಗೆ ಅಮ್ಮ ಬಲಿಯಾಗಿದ್ದಾರೆ. ಮಗನಿಗೆ ಗುಂಡು ಹೊಡೆಯುತ್ತಾ ರೆಂದು ತಾಯಿ ಅಡ್ಡ ಬಂದಿ , ತಾಯಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಅಗಳಖಾನ್ ಎಸ್ಟೇಟ್​​ನಲ್ಲಿ ಘಟನೆ ನಡೆದಿದೆ. ಮಗ ಬಿಟ್ಟು ಬಿಡದ ಪಬ್​​ಜಿ ಆಡುತ್ತಿದ್ದನು, ಪಬ್​​ಜಿಗಾಗಿ ಮಗ ಅಪ್ಪನೊಂದಿಗೆ ಜೊತೆ ಜಗಳಕ್ಕಿಳಿದಿದ್ದನು. ಅಪ್ಪ ಸಾಯಿಸುತ್ತೇನೆಂದು ಮಗನಿಗೆ ಕೋವಿ ಹಿಡಿದು ಬೆದರಿಸಿದ್ದಾನೆ. ಅಪ್ಪ ಕುಡಿದ ಮತ್ತಿನಲ್ಲಿ ಮಗನ ಮೇಲೆ ಗುಂಡು ಹಾರಿಸಿದ, ಈ ವೇಳೆ ಮಗನಿಗೆ ಗುಂಡು ಬೀಳುತ್ತೆ ಎಂದು ತಾಯಿ ಅಡ್ಡಬಂದಿದ್ದಾಳೆ. ಗುಂಡು ತಗುಲಿ ತಾಯಿ 40 ವರ್ಷದ ಮೈಮುನಾ ಸಾವನ್ನಪ್ಪಿದ್ದಾರೆ.

ಪತಿ ಇಮ್ತಿಯಾಸ್ ನನ್ನು  ಪೊಲೀಸರು ಬಂಧಿಸಿದ್ದು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love