ಚಿಕ್ಕಮಗಳೂರು: ರಾತ್ರೋ ರಾತ್ರಿ ಬೈಕ್ ಎಗರಿಸುತ್ತಿದ್ದ ಕಳ್ಳನ ಬಂಧನ – 4 ಲಕ್ಷ ಮೌಲ್ಯದ 11 ಬೈಕ್ ವಶ

Spread the love

ಚಿಕ್ಕಮಗಳೂರು: ರಾತ್ರೋ ರಾತ್ರಿ ಬೈಕ್ ಎಗರಿಸುತ್ತಿದ್ದ ಕಳ್ಳನ ಬಂಧನ – 4 ಲಕ್ಷ ಮೌಲ್ಯದ 11 ಬೈಕ್ ವಶ

ಚಿಕ್ಕಮಗಳೂರು: ರಾತ್ರೋ ರಾತ್ರಿ ಬೈಕ್ ಎಗರಿಸುತ್ತಿದ್ದ ಕತರ್ನಾಕ್ ಕಳ್ಳನನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಡೂರು ತಾಲೂಕಿನ ಶೆಟ್ಟಿ ಹಳ್ಳಿಯ ಮೋಹನ್ ಎಂದು ಗುರುತಿಸಲಾಗಿದೆ.

ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಹಿನ್ನಲೆ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ಮೋಹನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನಿಂದ 4 ಲಕ್ಷ ರೂ ಮೌಲ್ಯದ 11 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನಿಖೆ ವೇಳೆ ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಯ 11 ಪ್ರಕರಣ ಬಯಲಾಗಿದೆ. ಬೈಕ್ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಎಸ್ಪಿ ಜಿ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ತರಿಕೆರೆ ಡಿವೈಎಸ್ಪಿ ನಾಗರಾಜ್ ಎನ್ ಮತ್ತು ಕಡೂರು ಸಿಪಿಐ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಡೂರು ಪೊಲೀಸ್ ಉಪನಿರೀಕ್ಷಕರಾದ ಹರೀಸ್ ಅವರ ನೇತೃತ್ವದಲ್ಲಿ ಸಿಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ, ದೇವರಾಜ್, ಬೀರೇಶ್ ಮತ್ತು ರಮೇಶ್ ನಾಯ್ಕ ಹಾಗೂ ರಹಸ್ಯ ವಿಭಾಗದ ನಯಾಜ್ ಅಂಜುಮ್ ಮತ್ತು ರಬ್ಬಾನಿ ರವರು ಭಾಗವಹಿಸಿದ್ದರು.


Spread the love