ಚಿನ್ನದಂಗಡಿಗೆ ಕನ್ನ ಹಾಕಿದ ಕಳ್ಳನ ಬಂಧನ

Spread the love

ಚಿನ್ನದಂಗಡಿಗೆ ಕನ್ನ ಹಾಕಿದ ಕಳ್ಳನ ಬಂಧನ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಕನ್ನಿಕಾ ಜೂಯಲರ್ಸ್ ಗೆ ಕನ್ನ ಹಾಕಿ ಲಕ್ಷಾಂತರ ರೂ ಬೆಲೆಬಾಳುವ ಚಿನ್ನಾಭರಣ ದೋಚಿದ್ದ ಕಳ್ಳನನ್ನು ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ನಿವಾಸಿ, ಹೋಟೆಲ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಬಂಧಿತ ಕಳ್ಳ. ಈತ ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ಶ್ರೀ ನಿಧಿ ಹೊಟೇಲ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದನು.

ಈತ ಹೋಟೆಲ್ ಮಾಲೀಕರನಿಗೆ ನಂಬಿಕಸ್ಥ ಕೆಲಸಗಾರನಾಗಿದ್ದನು. ಹೋಟೆಲ್ ‌ಮಾಲೀಕ ರಘನಾಥನ್ ರವರಿಗೆ ಚಿನ್ನದ ಅಂಗಡಿ ಬೀದಿಯಲ್ಲಿ ಕನ್ನಿಕಾ ಜೂಯಲರ್ಸ್ ಎಂಬ ಚಿನ್ನದ ಅಂಗಡಿ ಇತ್ತು. ಲಾಕ್ ಡೌನ್ ಆಗಿದ್ದ ಹಿನ್ನಲೆಯಲ್ಲಿ ಚಿನ್ನದ ಅಂಗಡಿಗೆ ಬಾಗಿಲು ಹಾಕಿ ಅದರ ಕೀಯನ್ನು ತಂದು ಹೋಟೆಲ್ ನ ಡ್ರಾದಲ್ಲಿಟ್ಟಿದ್ದರು.

ಇದನ್ನು ನೋಡಿದ್ದ ಕಿರಣ್ ಗೆ ದುರಾಸೆ ಬಂದಿದೆ. ಕೀ ಎಗರಿಸಿ ಚಿನ್ನಾಭರಣ ದೋಚುವ ಸ್ಕೆಚ್ ಹಾಕಿದ್ದು, ಅದರಂತೆ ಚಿನ್ನದ ಅಂಗಡಿಗೆ ನುಗ್ಗಿ ಸುಮಾರು 5,87,500 ಲಕ್ಷ ರೂ ಬೆಲೆ ಬಾಳುವ 110 ಗ್ರಾಂ ಚಿನ್ನಾಭರಣ ಹಾಗೂ ಒಂದೂವರೆ ಕೆ.ಜಿ ಬೆಳ್ಳಿ ಒಡವೆಗಳನ್ನು ಕಳವು ಮಾಡಿ ತಲೆಮರೆಸಿ ಕೊಂಡಿದ್ದನು.

ಹೋಟೆಲ್ ಮಾಲೀಕ ರಘುನಾಥ್ ಅವರು ಕಿರಣ್ ವಿರುದ್ಧ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಮಾದೇಗೌಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ವೇಳೆ ಆರೋಪಿ ಕಿರಣ್ ತಮಿಳುನಾಡಿನ ಹೊಸೂರಿನಲ್ಲಿ ತಲೆಮರೆಸಿ ಕೊಂಡಿರುವ ಬಗ್ಗೆ ಮಾಹಿತಿ ದೊರಕಿದೆ ಹಿನ್ನಲೆಯಲ್ಲಿ ತಮಿಳು ನಾಡಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.


Spread the love