ಚಿನ್ನದ ಪದಕ ಪುರಸ್ಕೃತ ಸಿಬಂದಿಗಳಿಗೆ ಅಗ್ನಿ ಶಾಮಕ ಇಲಾಖೆಯ ಸಹದ್ಯೋಗಿಗಳಿಂದ ಸನ್ಮಾನ‌

Spread the love

ಚಿನ್ನದ ಪದಕ ಪುರಸ್ಕೃತ ಸಿಬಂದಿಗಳಿಗೆ ಅಗ್ನಿ ಶಾಮಕ ಇಲಾಖೆಯ ಸಹದ್ಯೋಗಿಗಳಿಂದ ಸನ್ಮಾನ‌

ಉಡುಪಿ: ಮುಖ್ಯಮಂತ್ರಿಗಳಿಂದ‌ ಚಿನ್ನದ ಪದಕ ಸ್ವೀಕರಿಸಿದ ಅಗ್ನಿಶಾಮಕ ಹಾಗೂ ತುರ್ತು ಸೇವಾ ದಳದ ನಾಲ್ವರು ಸಿಬಂದಿಗಳಿಗೆ ಸನ್ಮಾನ ಕಾರ್ಯಕ್ರಮವು ಉಡುಪಿ ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ದಳದ ಕಚೇರಿ ಯಲ್ಲಿ ನಡೆಯಿತು.

ಉಡುಪಿ‌ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಹೆಚ್ ಎಂ ವಸಂತ್ ಕುಮಾರ್,ಆಶ್ವಿನ್ ಸನಿಲ್, ಎಂ ಕೇಶವ್ ಹಾಗೂ ನೂತನ್ ಕುಮಾರ್ ಇವರುಗಳಿಗೆ ಇಲಾಖೆಯ ಸಿಬಂದಿಗಳು ಗೌರವಯುತವಾಗಿ ಪೇಟಾ ,ಶಾಲು ಹೊದಿಸಿ ಸನ್ಮಾನಿಸಿದರು.

ಅಗ್ನಿ ಶಾಮಕ‌ ಹಾಗು ತುರ್ತು ಸೇವಾ ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಠಾಣಾಧಿಕಾರಿ ಸತೀಶ್ ವಹಿಸಿದ್ದರು , ಸಿಬಂದಿ ವಿನಾಯಕ್ ಸ್ವಾಗತಿಸಿದರು. ಅಲ್ವಿನ್ ಪ್ರಶಾಂತ್‌ ವಂದಿಸಿದರು.


Spread the love