ಚಿನ್ನದ ಸರ ಸುಲಿಗೆ ಆರೋಪ ಎದುರಿಸುತ್ತಿದ್ದ ಪೊಲೀಸ್ ಸಿಬಂದಿ ನಿರ್ದೋಷಿ ತೀರ್ಪು ನೀಡಿದ ನ್ಯಾಯಾಲಯ

Spread the love

ಚಿನ್ನದ ಸರ ಸುಲಿಗೆ ಆರೋಪ ಎದುರಿಸುತ್ತಿದ್ದ ಪೊಲೀಸ್ ಸಿಬಂದಿ ನಿರ್ದೋಷಿ ತೀರ್ಪು ನೀಡಿದ ನ್ಯಾಯಾಲಯ

ಮಂಗಳೂರು: ಚಿನ್ನದ ಸರ ಸುಲಿಗೆ ಪ್ರಕರಣದಲ್ಲಿ ಪೊಲೀಸ್ ಸಿಬಂದಿಯೋರ್ವರ ಮೇಲೆ ದಾಖಲಾದ ಆರೋಪದಲ್ಲಿ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ.

ಮಹಾಲಕ್ಷ್ಮೀ ಲೇ ಔಟ್ ಪೊಲೀಸ್ ಠಾಣೆಯ ಸಿಬಂದಿ ಸಂದೇಶ್ ನಿರ್ದೋಷಿಯಾದ ವ್ಯಕ್ತಿ

2016 ಏಪ್ರಿಲ್ 12 ರಂದು ಬರ್ಕೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬಲ್ಲಾಳ್ ಭಾಗ್ ಲೋಬೊ ಕಂಪೌಂಡ್ ಎಂಬಲ್ಲಿ ಮಾಲಿನಿ ಶೆಟ್ಟಿ ಎಂಬವರು ಬಸ್ ನಿಲ್ದಾಣದ ಬಳಿ ಶ್ರೀ ದೇವಿ ಕಾಲೇಜು ಕಡೆಗೆ ಬರುವ ರಸ್ತೆಯ ಸಂದೇಶ್ ಎಂಬಾತ ಕುಡಿಯಲು ನೀರು ಕೇಳಿ ಮತ್ತು ಕೆಲವು ಪೋನ್ ನಂಬರ್ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿ ಆಕೆಯನ್ನು ದೂಡಿಹಾಕಿ ಗಾಯಗೊಳಿಸಿದ್ದನು ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಪ್ರಕರಣವನ್ನು ವಿಚಾರಣೆ ನಡೆಸಿದ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್ ವಿ ಅವರು ಆರೋಪಿತ ಪೊಲೀಸ್ ಸಿಬಂಧಿ ಸಂದೇಶ‍ ನಿರ್ದೋಷಿ ಎಂದು ತೀರ್ಪು ನೀಡಿದೆ.

ಅರೋಪಿತರ ಪರವಾಗಿ ಮಂಗಳೂರಿನ ವಕೀಲರಾದ ಜಗದೀಶ್ ಕೆ.ಆರ್ ಮತ್ತು ಪ್ರಸಾದ್ ಪಾಲನ್ ರವರು ವಾದ ಮಂಡಿಸಿದ್ದರು.


Spread the love