
ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಮಂಗಳೂರು: ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದ ಮೇಲೆ ಬಂಧನದಲ್ಲಿದ್ದ ಆರೋಪಿಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 5,000/- ರೂ ಗಳ ದಂಡವನ್ನು ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ ನಂ: 24/2006 ಕಲಂ: 450, 380 ಜೊತೆಗೆ 34 ಐ.ಪಿ.ಸಿ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 14-03-2006 ರಿಂದ 16-03-2006 ರ ಮಧ್ಯೆ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮಹೇಂದ್ರ ಕುಮಾರ್ ತಂದೆ: ಸುಂದರ ನಾಯ್ಕರವರ ಮನೆಯ ಬಾಗಿಲಿನ ಬೀಗದ ಕೊಂಡಿಯನ್ನು ಬಲತ್ಕಾರವಾಗಿ ತುಂಡರಿಸಿ ತೆಗೆದು ಒಳ ಪ್ರವೇಶಿಸಿ ಸೂಟ್ ಕೇಸ್ ನಲ್ಲಿದ್ದ ಸುಮಾರು 43,000/- ಬೆಲೆಬಾಳುವ 50.930 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಆರೋಪಿಗಳಾದ ಸಂತೋಷ ಮತ್ತು ನಾಗರಾಜ್ ಬಳೆಗಾರ ಎಂಬವರನ್ನು ಜಿಲ್ಲಾ ಅಪರಾಧ ಪತ್ತೆ ದಳದ ನಿರೀಕ್ಷಕರಾದ ತಿಲಕ್ ಚಂದ್ರ ರವರು ಸೊತ್ತು ಹಾಗೂ ಆರೋಪಿಗಳನ್ನು ದಸ್ತಗಿರಿ ಮಾಡಿ ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿಕೊಂಡದ್ದನ್ನು ಆಗಿನ ಪುತ್ತೂರು ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಕೃಷ್ಣ ನಾಯ್ಕ್ ರವರು ಆರೋಪಿಗಳ ಮೇಲೆ ದೋಷರೋಪಣಾಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಸದ್ರಿ ಪ್ರಕರಣವು ನ್ಯಾಯಾಲಯದಲ್ಲಿ ಸಿ.ಸಿ ನಂಬ್ರ 864/2014 ರಂತೆ ವಿಚಾರಣೆ ನಡೆದು ದಿನಾಂಕ: 03-03-2022 ರಂದು ಎ1 ಆರೋಪಿಯಾದ ನಾಗರಾಜ್ ಬಳೆಗಾರ (34) ತಂದೆ: ಪ್ರಬಾಕರ ಬಳೆಗಾರ ವಾಸ: ವಿದ್ಯಾನಗರ ಹೊನ್ನಕಟ್ಟೆ ಸುರತ್ಕಲ್ ಮಂಗಳೂರು ತಾಲೂಕು ಎಂಬಾತನಿಗೆ ಶಿಕ್ಷೆಯನ್ನು ಪ್ರಕಟಿಸಿದ್ದು ಕಲಂ: 457 ಐ.ಪಿ.ಸಿ ಗೆ ಸಂಬಂಧಿಸಿದಂತೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 5,000/- ರೂ ಗಳ ದಂಡವನ್ನು ವಿಧಿಸಿದೆ ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಪ್ರಕಟಿಸಿದೆ. ಕಲಂ: 380 ಐ.ಪಿ.ಸಿ ಗೆ ಸಂಬಂಧಿಸಿದಂತೆ 4 ವರ್ಷಗಳ ಕಾರಾಗೃಹ ವಾಸ ಹಾಗೂ 4,000/- ರೂ ಗಳ ದಂಡ ತಪ್ಪಿದ್ದಲ್ಲಿ 5 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಪ್ರಕಟಿಸಿದೆ . ಆರೋಪಿಯು ಪ್ರಸ್ತುತ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗಬಂಧನ ದಲ್ಲಿರುತ್ತಾನೆ