
Spread the love
ಚುನಾವಣೆಯಲ್ಲಿ ಘರ್ಜಿಸದ ‘ಸಿಂಗಂ’ ಅಣ್ಣಾಮಲೈ ! ಸ್ಟಾರ್’ಗಳಿಗೂ ಮಣೆಹಾಕದ ಮತದಾರ
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ಅತಿರಥ-ಮಹಾರಥರು ಎಡವಿ ಬೀಳುವ ಲಕ್ಷಣಗಳು ಘೋಚರಿಸುತ್ತಿವೆ. ಹಲವು ಖ್ಯಾತನಾಮರು ಈ ಬಾರಿ ಚುನಾವಣೆಯಲ್ಲಿ ರಾಜಕೀಯ ಭವಿಷ್ಯ ಪಣಕ್ಕೆ ಇಟ್ಟಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಂದಿ ಗ್ರಾಮ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸುತ್ತಿದ್ದಾರೆ. ಬಿಜೆಪಿಯಿಂದ ತಮಿಳುನಾಡಿನಲ್ಲಿ ಸ್ಪರ್ಧಿಸಿರುವ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿ ಆಗಿದ್ದ ಅಣ್ಣಾಮಲೈ ಕೂಡ ಆರಂಭಿಕ ಹಿನ್ನಡೆ ಅನುಭವಿಸುತ್ತಿದ್ದಾರೆ.
ಸ್ವಕ್ಷೇತ್ರ ತಮಿಳುನಾಡಿನ ಅರವಕುರುಚ್ಚಿಯಿಂದ ಅಣ್ಣಾಮಲೈ ಸ್ಪರ್ಧೆಗಿಳಿದಿದ್ದರು.
ನಟ ಕಮಲ್ ಹಾಸನ್ ಸಹ ಆರಂಭಿಕ ಹಿನ್ನಡೆ ಅನುಭವಿಸಿದ್ದಾರೆ. ನಟಿ ಖುಷ್ಬು ಕೂಡ ಚುನಾವಣಾ ಅಖಾಡದಲ್ಲಿ ಗೆಲುವಿನ ಲಯಕ್ಕೆ ಮರಳಲು ಪರದಾಡುವಂತಾಗಿದೆ.
Spread the love
Why did our friend join this party?