
ಚುನಾವಣೆಯಲ್ಲಿ ಸೋತ ಮಿಥುನ್ ರೈ ಗೆ ಸಂಸದೆ ಶೋಭಾ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ – ನಯನಾ ಗಣೇಶ್
ಉಡುಪಿ: ಉಡುಪಿ ಯಲ್ಲಿ ನಿನ್ನೆ ಕಾಂಗ್ರೇಸ್ ಪಕ್ಷದಿಂದ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಯವರು ಕೇಂದ್ರ ಸಚಿವೆ,ಸಂಸದೆ ಶೋಭಾ ಕರಂದ್ಲಾಜೆ ಸೆಲ್ಫಿ ತೆಗೆದು ಬಹುಮಾನ ಗಳಿಸಿ ಹೇಳಿಕೆ ನೀಡಿರುವುದನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಖಂಡಿಸಿದ್ದಾರೆ,
ಕಾಂಗ್ರೆಸ್ ಪಕ್ಷ ಉಡುಪಿ ಜಿಲ್ಲೆಯಲ್ಲಿ ಮುಕ್ತವಾಗಿದ್ದು,ಕಾಂಗ್ರೆಸ್ ನಾಯಕರು ಹತಾಶೆ ಗೆ ಒಳಗಾಗಿದ್ದಾರೆ, ಮಿಥುನ್ ರೈ ರಾಜಕೀಯ ಕ್ಕೆ ಬರುವ ಮೊದಲೇ ಶೋಭಾ ಕರಂದ್ಲಾಜೆ ಯವರು ಸಂಘಟನೆ, ಪಕ್ಷದಲ್ಲಿ ಕೆಲಸ ಮಾಡಿದವರು, ಮಿಥುನ್ ರೈ ಮೊದಲು ತಮ್ಮ ರಾಜಕೀಯ ಭವಿಷ್ಯವನ್ನು ಗಮನಿಸಲಿ, ಕಳೆದ ಬಾರಿ ಲೋಕ ಸಭಾ ಚುನಾವಣೆ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ತಿರಸ್ತೃತವಾದ ವ್ಯಕ್ತಿ ನಮ್ಮ ಸಂಸದೆ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ, ಕೇಂದ್ರ ಕೃಷಿ ಸಚಿವೆಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಶೋಭಾ ಕರಂದ್ಲಾಜೆ ಯವರು ಜಿಲ್ಲೆಯ ಸಮಸ್ಯೆ ಯ ಬಗ್ಗೆ ಸದಾ ಕ್ರಿಯಾಶೀಲವಾಗಿದ್ದರೆ, ಹಣ ದ ಮೂಲಕ ಜಿಲ್ಲೆಯ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ, ಉಡುಪಿ ಜಿಲ್ಲೆಯ ಜನ ಪ್ರಜ್ಞಾವಂತರಾಗಿದ್ದು ನಿಮ್ಮ ಇಂತಹ ಪ್ರಚಾರ ಗಿಟ್ಟಿಸುವ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ,ಮುಂದಿನ ದಿನಗಳಲ್ಲಿ ಜಿಲ್ಲೆಯ ಜನ ಕಾಂಗ್ರೆಸ್ ಗೆ ಮತ್ತೊಮ್ಮೆ ತಕ್ಕ ಉತ್ತರವನ್ನು ನೀಡಲಿದ್ದಾರೆಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ