
ಚುಸಾಪ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನೋತ್ತರ ಸಂಭ್ರಮ ಹಾಗೂ ಬೃಹತ್ ವಿದ್ಯಾರ್ಥಿ ಸನ್ಮಾನ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವರ ನೇತೃತ್ವದಲ್ಲಿ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಚುಟುಕು ಸಾಹಿತ್ಯ ಸಮ್ಮೇಳನೋತ್ತರ ಸಂಭ್ರಮ ಹಾಗೂ ಬೃಹತ್ ವಿದ್ಯಾರ್ಥಿ ಸನ್ಮಾನ ಸಮಾರಂಭವನ್ನು ಅಕ್ಟೊಬರ್ 2ನೇ ತಾರೀಕು ಭಾನುವಾರದಂದು ಮಂಗಳೂರಿನ ಊರ್ವಸ್ಟೋರ್ ಬಳಿ ಇರುವ ತುಳುಭವನದ ಸಿರಿ ಚಾವಡಿ ವೇದಿಕೆಯಲ್ಲಿ ಏರ್ಪಡಿಸಲಾಗಿದೆ.
9ನೇ ದ. ಕ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಶ್ರೀಕೃಷ್ಣಯ್ಯ ಅನಂತಪುರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕರಾವಳಿ ಕಾಲೇಜು ಸಮೂಹದ ಸ್ಥಾಪಕಾಧ್ಯಕ್ಷರಾಗಿರುವ ಎಸ್ ಗಣೇಶ್ ರಾವ್ ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡುವರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್ಸಾರ್ ಅವರು ಹಿರಿಯ ನಾಟಕಕಾರ ಗಂಗಾಧರ ಕಿದಿಯೂರು ಅವರ 14 ತುಳು ನಾಟಕಗಳ ಸಂಪುಟ “ಮೆನ್ಕುನ ಸಿರಿ ಸಿಂಗಾರ” ವನ್ನು ಲೋಕಾರ್ಪಣೆ ಮಾಡುವರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಹರೀಶ ಸುಲಾಯ ಒಡ್ಡಂಬೆಟ್ಟು ಪ್ರಾಸ್ತಾವಿಕ ವಾಗಿ ಮಾತಾಡುವರು. ಉಡುಪಿ ಜಿಲ್ಲಾ ಚುಸಾಪ ಜಿಲ್ಲಾ ಗೌರವಾಧ್ಯಕ್ಷೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ತಾರಾ ಆಚಾರ್ಯ ಅವರು ಕೃತಿ ಪರಿಚಯ ಮಾಡುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ ಅವರು ಚುಟುಕು ಸಾಹಿತ್ಯ ಸಪ್ತಹದ ವಿಜೇತರನ್ನು ಸನ್ಮಾನಿಸುವರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಶುಭಾಶಂಸನೆ ಗೈಯುವರು. ಮೂಡಬಿದ್ರೆ ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರಿಸ್ ಮುಖ್ಯಸ್ಥ ಶ್ರೀಪತಿ ಭಟ್, ಯುಗಪುರುಷ ಮಾಸ ಪತ್ರಿಕೆಯ ಸಂಪಾದಕರು ಕೊಡೆತ್ತೂರು ಭುವನಾಭಿರಾಮ ಉಡುಪ, ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಜನಪ್ರಿಯ ನಾಟಕಕಾರ ನ್ಯಾಯವಾದಿ ಶಶಿರಾಜ್ ಕಾವೂರು,ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ಉಡುಪಿ ಜಿಲ್ಲಾ ಚುಸಾಪದ ಅಧ್ಯಕ್ಷರಾದ ಕಾ.ವೀ.ಕೃಷ್ಣದಾಸ್, ದಕ್ಷಿಣ ಕನ್ನಡ ಜಿಲ್ಲಾ ಚುಸಾಪ ಗೌರವಧ್ಯಕ್ಷ ಹಿರಿಯ ಸಾಹಿತಿ ಇರಾ ನೇಮು ಪೂಜಾರಿ, ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಇದರ ಅಧ್ಯಕ್ಷ ಚಂದ್ರಹಾಸ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸನ್ಮಾನ
ಇದೇ ಸಮಾರಂಭದಲ್ಲಿ ತಮ್ಮ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಪತ್ರಕರ್ತ ಗುರುವಪ್ಪ ಎನ್ ಟಿ ಬಾಳೆಪುಣಿ(ಪತ್ರಿಕೋದ್ಯಮ), CA ಎಸ್ ಎಸ್ ನಾಯಕ್ (ಲೆಕ್ಕ ಪರಿಶೋಧನೆ ),ನಟ ಗೋಪಿನಾಥ್ ಭಟ್ ( ಚಲನಚಿತ್ರ ನಟನೆ),ಶಿವರಾಮ ಕಾಸರಗೋಡು ಸಂಘಟಕರು (ಸಂಘಟನೆ) ಪೋಲೀಸ್ ನಿರೀಕ್ಷಕಿ ಭಾರತಿ ( ಕಾನೂನು ಸುವ್ಯವಸ್ಥೆಯಲ್ಲಿ ಶಿಸ್ತಿನ ಸೇವೆ), ನ್ಯಾಯವಾದಿ ದಯಾನಂದ ರೈ (ವಕಾಲತ್ತು),ನಾಟಕ ಕಲಾವಿದ ಪತ್ರಕರ್ತ ನರೇಂದ್ರ ಕೆರೆಕಾಡು (ರಂಗಭೂಮಿ), ಪ್ರಕಾಶ್ ಮೇಲಾಂಟ ಉಪನ್ಯಾಸಕರು (ಶಿಕ್ಷಣ),ಬಾಲಕೃಷ್ಣ ಕಾರಂತ್ (ಪೌರೋಹಿತ್ಯ) ಇವರನ್ನು ಸನ್ಮಾನಿಸಲಾಗುವುದು.
ಚುಟುಕು ಕವಿಗೋಷ್ಠಿ
ಹಳೇ ಬೇರು ಹೊಸ ಚಿಗುರು ಪರಿಕಲ್ಪನೆಯಲ್ಲಿ ಹಿರಿಯ ಸಾಹಿತಿ ಸತ್ಯವತಿ ಭಟ್ ಕೊಳಚಪ್ಪು ಮತ್ತು ಯುವ ಕವಯತ್ರಿ ಸೌಮ್ಯ ಗೋಪಾಲ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದ್ದು ಆಶಾ ಅಡೂರು ಉಜಿರೆ,ರೇಮಂಡ್ ಡಿಕುನಾ ತಾಕೊಡೆ,ಗಿರೀಶ್ ಪಿ ಎಂ ಕಾಸರಗೋಡು,ಎಸ್ ಕೆ ಕುಂಪಲ,ಹಿತೇಶ್ ಕುಮಾರ್ ಎ,ರಾಜೇಶ್ವರಿ ಎಚ್ ಬಜ್ಪೆ,ಮಂಜುಶ್ರೀ ಎನ್ ನಲ್ಕ,ರೇಖಾ ಸುದೇಶ್ ರಾವ್,ಜಯರಾಮ ಪಡ್ರೆ,ಪ್ರಭಾಕರ ಭಟ್ ಟಿ ಪೋಳ್ಯ,ಪ್ಲಾವಿಯ ಆಲ್ಬುಕರ್ಕ್ ಪುತ್ತೂರು,ಸ್ವಾತಿ ಅದಿಂಜ,ನರಸಿಂಹ ಭಟ್ ಕಟ್ಟದಮೂಲೆ,ಗೋಪಾಲಕೃಷ್ಣ ಶಾಸ್ತ್ರಿ,ಸುಹಾನ ಸಯ್ಯದ್ ಎಂ,ರಶ್ಮಿ ಸನಿಲ್,ವ. ಉಮೇಶ್ ಕಾರಂತ್, ನಾರಾಯಣ ನಾಯ್ಕ ಕುದುಕೋಳಿ,ಎಡ್ವರ್ಡ್ ಲೋಬೋ,ಅಬ್ದುಲ್ ಸಮದ್ ಬಾವ,ಸುಮಂಗಲ ದಿನೇಶ್ ಶೆಟ್ಟಿ, ಅಮೃತ ಸಂದೀಪ್ ಉಡುಪಿ,ಆಕೃತಿ ಐ ಎಸ್ ಭಟ್,ಸುಶೀಲಾ ಕೆ ಪಾದ್ಯಾಣ,ಅಕ್ಷರ ಪಟವಾಲ್ ಬೈಂದೂರು,ಅರ್ಚನಾ ಎಂ ಬಂಗೇರ ಕುಂಪಲ,ವಿದ್ಯಾ ಗಣೇಶ್ ಸೌಮ್ಯ ಆರ್ ಶೆಟ್ಟಿ, ರೇಖಾ ನಾರಾಯಣ್,ವಿಂದ್ಯಾ ರೈ,ಆನಂದ ರೈ ಅಡ್ಕಸ್ಥಳ,ಹರಿಭಟ್ ಪೆಲ್ತಾಜೆ,ಗೀತಾ ಲಕ್ಷ್ಮೀಶ್,ಉಮೇಶ್ ಶಿರಿಯಾ ಮೊದಲಾದ ಕವಿ ಕವಯತ್ರಿಯರು ತಮ್ಮ ಚುಟುಕುಗಳನ್ನು ಪ್ರಸ್ತುತ ಪಡಿಸುವರು.
ನೃತ್ಯ ಸಂಗಮ
ಉದ್ಘಾಟನಾ ಸಮಾರಂಭದ ಬಳಿಕ ನಡೆಯುವ ನೃತ್ಯ ಸಂಗಮದಲ್ಲಿ ಲಾಲಿತ್ಯ ಬೇಲೂರು, ನಿರೀಕ್ಷಾ ಶೆಟ್ಟಿ, ಸುದೀಷ್ಣ ಶೆಟ್ಟಿ, ಪ್ರಾಪ್ತಿ ಶೆಟ್ಟಿ, ಅಪೂರ್ವ ಸೋಮೇಶ್ವರ ಇವರಿಂದ ನೃತ್ಯ ಪ್ರದರ್ಶನಗಳು ನಡೆಯಲಿವೆ.
ಬೃಹತ್ ವಿದ್ಯಾರ್ಥಿ ಸನ್ಮಾನ
2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಹಾಗೂ ದ್ವಿತೀಯ ಪಿಯುಸಿಯಲ್ಲಿ 575ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.