Home Mangalorean News Kannada News ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ; ಮಕ್ಕಳೊಂದಿಗೆ ಪೋಲಿಸ್ ಸಂವಾದ

ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ; ಮಕ್ಕಳೊಂದಿಗೆ ಪೋಲಿಸ್ ಸಂವಾದ

Spread the love

ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ; ಮಕ್ಕಳೊಂದಿಗೆ ಪೋಲಿಸ್ ಸಂವಾದ
ಮಂಗಳೂರು: ಚೈಲ್ಡ್ ಲೈನ್, ರೋಶನಿ ನಿಲಯ, ಮಂಗಳೂರು ಹಾಗೂ ಪಡಿ ಸಂಸ್ಥೆ, ಬೆಂದೂರುವೆಲ್ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಬುಧವಾರ ಮಂಗಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಂಡೇಶ್ವರ ಶಾಲೆಯ ಸುಮಾರು 40 ಮಕ್ಕಳು ಪೊಲೀಸ್ ಕಮಿಷನರ್ ಕಛೇರಿಗೆ ಭೇಟಿ ನೀಡಿದರು.

photo-2-300x169

ನಂತರ ಪೊಲೀಸ್ ಕಮಿಷನರ್ ಕಛೇರಿಯ ಕಾನ್ಫರೆನ್ಸ್ ಹಾಲ್ ನಲ್ಲಿ ಹಮ್ಮಿಕೊಂಡಿರುವ ”ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ” ಕಾರ್ಯಕ್ರಮದ ಅಂಗವಾಗಿ ” ಸುರಕ್ಷಾ ಬಂಧನ ” ಕಾರ್ಯಕ್ರಮದಲ್ಲಿ ” ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ” ಎಂಬ ಪರಿಕಲ್ಪನೆಯಂತೆ ಚಂದ್ರಶೇಖರ್ ಐಪಿಎಸ್, ಪೊಲೀಸ್ ಕಮಿಷನರ್, ಮಂಗಳೂರು ನಗರರವರು ಮಕ್ಕಳಿಗೆ ಪೊಲೀಸ್ ಇಲಾಖೆಯ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದರು. ಈ ಸಮಯ ಶಾಲಾ ಮಕ್ಕಳು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ”ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ”ದ Wrist Band ಕಟ್ಟಿದರು. ಈ ಸಂದರ್ಭದಲ್ಲಿ  ಕೆ. ಶಾಂತರಾಜು ಡಿಸಿಪಿ(ಕಾ&ಸು) ಹಾಗೂ ಡಾ|| ಎಂ. ಸಂಜೀವ್ ಪಾಟೀಲ್, ಡಿಸಿಪಿ(ಅಪರಾಧ & ಸಂಚಾರ) ಮತ್ತು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರುಗಳು ಹಾಜರಿದ್ದರು. ಮಕ್ಕಳ ವಿಶೇಷ ಪೊಲೀಸ್ ಘಟಕದ ಪಿಐ ಶ್ರೀ ರಫೀಕ್ ಹಾಗೂ ಸಿಬ್ಬಂದಿಯವರು ಕಾರ್ಯಕ್ರಮ ನಿರೂಪಿಸಿದರು.

ನಂತರ ಶಾಲಾ ಮಕ್ಕಳಿಗೆ ಪೊಲೀಸ್ ಕಂಟ್ರೋಲ್ ರೂಂ, ಸಿಟಿ ಸ್ಪಷಲ್ ಬ್ರಾಂಚ್ ಹಾಗೂ ಪೊಲೀಸ್ ಶ್ವಾನ ದಳದ ಕೆಲಸ ಕಾರ್ಯಗಳನ್ನು ಆಯಾಯ ಘಟಕದ ಪೊಲೀಸ್ ಸಿಬ್ಬಂದಿಗಳಿಂದ ಪರಿಚರಿಯಿಸಲಾಯಿತು. ಲಘೂಪಹಾರದೊಂದಿಗೆ ಶಾಲಾ ಮಕ್ಕಳನ್ನು ಬೀಳ್ಕೊಡಲಾಯಿತು.


Spread the love

Exit mobile version