ಛಾಯಾಗ್ರಾಹಕ ಪ್ರವೀಣ್ ಕೊರೆಯಾಗೆ ಸ್ಪೆಕ್ಟ್ರಂ ರಾಷ್ಟ್ರೀಯ ಸರ್ಟಿಫಿಕೇಟ್ ಪ್ರಶಸ್ತಿ
ಉಡುಪಿ: ಉಡುಪಿ ಮೂಲದ ಖ್ಯಾತ ಛಾಯಾಗ್ರಾಹಕ ಪ್ರವೀಣ್ ಕೊರೆಯಾಅವರಿಗೆ ಎರಡು ಛಾಯಾಚಿತ್ರಗಳಿಗೆ ಪ್ರತಿಷ್ಠಿತ ಸ್ಪೆಕ್ಟ್ರಂ ನ್ಯಾಷನಲ್ ಸರ್ಟಿಫಿಕೆಟ್ ಅವಾರ್ಡ್ ಲಭಿಸಿದೆ.
“Unfinished Race” ಎಂಬ ಶೀರ್ಷಿಕೆಯ ಛಾಯಾಚಿತ್ರವು ಓಪನ್ ಕಲರ್ ವಿಭಾಗದಲ್ಲಿ ಕ್ಲಬ್ ಅವಾರ್ಡ್ (ಪದಕ) ಪಡೆದುಕೊಂಡಿದ್ದು, “Soote Daara” ಎಂಬ ಚಿತ್ರವು ಜ್ಯೂರಿ ಆಯ್ಕೆ ಪ್ರಶಸ್ತಿಗೆ ಭಾಜನವಾಗಿದೆ.
21 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಪ್ರವೀಣ್ ಕೊರೆಯಾಅವರು ತಮ್ಮ ಸೃಜನಾತ್ಮಕ ಛಾಯಾಗ್ರಹಣ ಕೌಶಲ್ಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರು ಕಲ್ಮಾಡಿ ಮತ್ತು ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಯಾನಿ ಡಿಜಿಟಲ್ ಸ್ಟುಡಿಯೋ ಮಾಲೀಕರಾಗಿದ್ದಾರೆ.
ವೃತ್ತಿಜೀವನದ ಜೊತೆಗೆ, ಪ್ರವೀಣ್ ಸಮಾಜಮುಖಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಪ್ರಸ್ತುತ ಅವರು ದಕ್ಷಿಣ ಕನ್ನಡ ಛಾಯಾಗ್ರಾಹಕರ ಸಂಘ, ಉಡುಪಿ ವಲಯದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.