
ಛಾಯಾಗ್ರಾಹಕ ಮಧುಸೂದನ್ ಚಿತ್ರಗಳಿಗೆ 16 ಪದಕಗಳು
ಮೈಸೂರಿನ ಖ್ಯಾತ ಛಾಯಾಗ್ರಾಹಕ ಎಸ್.ಆರ್. ಮಧುಸೂದನ್ ಅವರ ವೈವಿಧ್ಯಮಯ ಛಾಯಾಚಿತ್ರಗಳಿಗೆ ಮೂರು ಪ್ರತ್ಯೇಕ ವಿಭಾಗದ ಛಾಯಾಚಿತ್ರ ಸ್ಪರ್ಧೆಯಲ್ಲಿ ಫೋಟೋ ಜರ್ನಿಸಂ ಹಾಗೂ ವನ್ಯಜೀವಿ ಛಾಯಾ ಚಿತ್ರಗಳಿಗೆ 9 ಚಿನ್ನದ ಪದಕ, 4 ಚೂರೀಸ್ ಚಾಯ್ಸ್ ಪದಕ, 1 ಬೆಳ್ಳಿ ಪದಕ ಹಾಗೂ 2 ಕಂಚಿನ ಪದಕ ಸೇರಿ ಒಟ್ಟು 16 ಪದಕಗಳು ಲಭಿಸಿವೆ.
ಮಧ್ಯಪ್ರದೇಶದ ನ್ಯೂ ಇಮೇಜ್ ಕ್ಲಬ್ ವತಿಯಿಂದ ನಡೆದ ನರ್ಮದಾ ಸರ್ಕಿಟ್ 2023, ಮಧ್ಯ ಪ್ರದೇಶದ ಕಲಾ-ಕುಂಭ ಫೋಟೋ ಸರ್ಕಿಟ್ 2023 ಹಾಗೂ ಉತ್ತರ ಪ್ರದೇಶದ ಗ್ರೇಟರ್ ನೋಯಿಡಾ ದ ಹಾಮ್ಯ ಸರ್ಕಿಟ್ 2023 ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ (PSA), ವೈಲ್ಡ್ ಲೈಫ್ ಫೋಟೋಗ್ರಾಫಿಕ್ ಸೊಸೈಟಿ ಆಫ್ ಇಂಡಿಯಾ(WPAI), ಗ್ಲೋಬಲ್ ಫೋಟೋಗ್ರಾಫಿಕ್ ಯೂನಿಯನ್(GPU) ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಸುಮಾರು 300ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಕೆನಡಾ, ಯುಎಸ್ಎ, ಇಂಡೋನೇಷ್ಯಾ ಇಂಗ್ಲೆಂಡ್, ಬೆಲ್ಜಿಯಂ, ವಿಯೆಟ್ ನಾಮ್, ಇಸ್ರೇಲ್, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಮಲೇಷಿಯಾ, ಸ್ವೀಡೆನ್, ಭಾರತ ಹಲವಾರು ಛಾಯಾಚಿತ್ರಗಾರರು ಸ್ಪರ್ಧಿಸಿರುತ್ತಾರೆ ಕರ್ನಾಟಕದ ಮೈಸೂರಿನ ಛಾಯಾಗ್ರಹಕರಿಗೆ ಈ ಸ್ಪರ್ಧೆಯಲ್ಲಿ ಪದಕಗಳು ಗಳಿಸುವುದು ಹೆಮ್ಮೆಯ ವಿಷಯವಾಗಿದೆ