ಜಂಬೂಸವಾರಿಯಲ್ಲಿ ಯಾವ ಆನೆಗಳು ಭಾಗವಹಿಸುತ್ತಿವೆ ಗೊತ್ತಾ?

Spread the love

ಜಂಬೂಸವಾರಿಯಲ್ಲಿ ಯಾವ ಆನೆಗಳು ಭಾಗವಹಿಸುತ್ತಿವೆ ಗೊತ್ತಾ?

ಮೈಸೂರು: ಮೈಸೂರು ದಸರಾ ಅಂತಿಮ ಘಟ್ಟಕ್ಕೆ ತಲುಪಿದ್ದು, ಎಲ್ಲರೂ ನಿರೀಕ್ಷೆಯಲ್ಲಿರುವ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ 13 ಆನೆಗಳನ್ನು ಜಂಬೂಸವಾರಿ ತಯಾರಿ ಮಾಡುವ ಕೆಲಸ ನಡೆಯುತ್ತಿದೆ.

ಎಲ್ಲ ಆನೆಗಳಿಗೆ ಅಲಂಕಾರ ಮಾಡಲಾಗುತ್ತಿದೆ. ಸೊಂಡಿಲು, ಕಿವಿ, ತಲೆ, ಕಾಲುಗಳಿಗೆ ಬಣ್ಣಾದ ಚಿತ್ತಾರ ಮಾಡಲಾಗುತ್ತಿದೆ. ಇನ್ನು ಈ ಬಾರಿಯ ಜಂಬೂಸವಾರಿಯಲ್ಲಿ ಯಾವ ಆನೆಗಳೆಲ್ಲ ಭಾಗವಹಿಸುತ್ತಿವೆ ಎನ್ನುವುದನ್ನು ನೋಡಿದ್ದೇ ಆದರೆ ಅರ್ಜುನ ನೌಪತ್ ಆನೆಯಾಗಿ ಜಂಬೂಸವಾರಿಯಲ್ಲಿ ಮುನ್ನಡೆಯಲಿದ್ದಾನೆ. ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ. ಉಳಿದಂತೆ ಎಲ್ಲ ಆನೆಗಳಿಗೂ ಒಂದೊಂದು ರೀತಿಯ ಜವಬ್ದಾರಿಯಿದ್ದು ಎಲ್ಲ ಆನೆಗಳು ಜಂಬೂಸವಾರಿಯಲ್ಲಿ ಸಾಗಲಿವೆ.

ಜಂಬೂಸವಾರಿಯಲ್ಲಿ 21ವರ್ಷಗಳ ಕಾಲ ಭಾಗವಹಿಸಿ ಅನುಭವ ಹೊಂದಿರುವ 57ವರ್ಷದ 2.72 ಮೀ ಎತ್ತರ, 3.51 ಮೀ. ಉದ್ದ ಹಾಗೂ 5000 ಕೆಜಿ ತೂಕ ಹೊಂದಿದೆ. 63ವರ್ಷದ ಅರ್ಜುನನಿಗೆ ಜಂಬೂಸವಾರಿಯಲ್ಲಿ 22 ವರ್ಷಗಳ ಕಾಲ ಭಾಗವಹಿಸಿದ ಅನುಭವವಿದೆ ಎತ್ತರ 2.95ಮೀ, ಉದ್ದ 3.75 ಮೀ, 5775 ಕೆಜಿ ತೂಕವಿದ್ದಾನೆ.

63 ವರ್ಷದ ಹೆಣ್ಣು ಆನೆ ವಿಜಯ ಕಳೆದ 13 ವರ್ಷಗಳಿಂದ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದು.29ಮೀ. ಎತ್ತರ, 3 ಮೀ ಉದ್ದ ಹಾಗೂ 2760 ಕೆಜಿ ತೂಕವನ್ನು ಹೊಂದಿದ್ದಾಳೆ. 45 ವರ್ಷದ ಹೆಣ್ಣಾನೆ ಕಾವೇರಿ. 10 ವರ್ಷ ಜಂಬೂಸವಾರಿಯಲ್ಲಿ ಭಾಗವಹಿಸಿದ್ದು, 2.60ಮೀ ಎತ್ತರ, 3.32ಮೀ ಉದ್ದ ಹಾಗೂ 3245 ಕೆಜಿ ತೂಕ ಹೊಂದಿದೆ.

8ನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ 39 ವಯಸ್ಸಿನ ಗೋಪಾಲಸ್ವಾಮಿ 2.85 ಮೀ. ಎತ್ತರ, 3.42ಮೀ. ಉದ್ದ, 5460ಕೆಜಿ ತೂಕವಿದೆ. 11 ವರ್ಷದಿಂದ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿರುವ 41 ವರ್ಷದ ಗೋಪಿ ಎತ್ತರ 2.92 ಮೀ. ಉದ್ದ 3.42 ಮೀ. ತೂಕ 4670ಕೆಜಿಯಿದೆ. 49 ವರ್ಷದ ಚೈತ್ರ ಕಳೆದ ಎರಡು ವರ್ಷಗಳಿಂದ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದೆ. ಎತ್ತರ 2.30 ಮೀ, ಉದ್ದ 3.10 ಮೀ. 2600 ಕೆಜಿ ತೂಕ ಹೊಂದಿದೆ.

44ವರ್ಷದ ಧನಂಜಯ ಕಳೆದ ನಾಲ್ಕು ವರ್ಷದಿಂದ ದಸರಾದಲ್ಲಿ ಭಾಗವಹಿಸುತ್ತಿದ್ದು,2.93 ಮೀ ಎತ್ತರ, 3.84 ಮೀ ಉದ್ದ ಮತ್ತು 4890 ಕೆಜಿ ತೂಕವಿದೆ. ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿರುವ ಭೀಮನಿಗೆ 22 ವರ್ಷ ಪ್ರಾಯ. ಈತನಿಗೆ ಈ ಹಿಂದೆ ಒಮ್ಮೆ ದಸರಾದಲ್ಲಿ ಭಾಗವಹಿಸಿದ ಅನುಭವವಿದೆ. ಈ ಬಾರಿ ನಿಶಾನೆ ಆನೆಯ ಪಟ್ಟ ನೀಡಲಾಗಿದೆ.2.87ಮೀ ಎತ್ತರ, 3.05 ಮೀ ಉದ್ದ ಹಾಗೂ 4345 ತೂಕವಿದೆ. 40 ವರ್ಷದ ಸುಗ್ರೀವ 2.60 ಮೀ ಎತ್ತರ ಮತ್ತು 3.25 ಮೀ ಉದ್ದ ಹೊಂದಿದೆ.4785 ಕೆಜಿ ಹೊಂದಿದೆ. ಇದೆಲ್ಲದರ ನಡುವೆ ಜಂಬೂಸವಾರಿಗೆ ಬಂದಿದ್ದ ಹೆಣ್ಣು ಆನೆ ಲಕ್ಷ್ಮಿ ಮರಿಗೆ ಜನ್ಮ ನೀಡಿದ ಕಾರಣ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

39 ವರ್ಷದ ಮಹೇಂದ್ರ ಎತ್ತರ 2.74, ಉದ್ದ 3.25, ತೂಕ 4450 ಕೆಜಿಯಿದೆ. ಇದು ಮೊದಲ ದಸರವಾಗಿದೆ. ಅತಿ ಕಿರಿಯನಾದ 18ವರ್ಷದ ಪಾರ್ಥಸಾರಥಿಗೂ ಇದು ಮೊದಲ ದಸರವಾಗಿದೆ. ಎತ್ತರ 2.60, ಉದ್ದ 3.30ಮೀ. ಹಾಗೂ 3445 ಕೆಜಿ ತೂಕ ಹೊಂದಿದ್ದಾನೆ. 40 ವರ್ಷ ಪ್ರಾಯದ ಶ್ರೀರಾಮನಿಗೂ ಇದು ಮೊದಲ ದಸರಾವಾಗಿದೆ. ಎತ್ತರ 2.77, ಉದ್ದ 3.45, ತೂಕ 4475 ಕೆಜಿ ತೂಕವಿದೆ. ಸದ್ಯ ಎಲ್ಲ ಆನೆಗಳು ಜಂಬೂಸವಾರಿಗೆ ಬೇಕಾದ ತಾಲೀಮು ನಡೆಸಿ ಸಜ್ಜಾಗಿದ್ದು, ಐತಿಹಾಸಿಕ ಜಂಬೂಸವಾರಿಗೆ ಕಳೆಕಟ್ಟಲು ತಯಾರಾಗಿವೆ.


Spread the love