ಜನಜಾನುವಾರಿಗೆ ಕಂಟಕವಾಗಿದ್ದ ಚಿರತೆ ಸೆರೆ

Spread the love

ಜನಜಾನುವಾರಿಗೆ ಕಂಟಕವಾಗಿದ್ದ ಚಿರತೆ ಸೆರೆ

ಹನೂರು: ಜನ ಜಾನುವಾರುಗಳನ್ನು ಕೊಂದು ಗ್ರಾಮಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲೂಕಿನ  ಕೆಂಚಯ್ಯನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಈ ಚಿರತೆ ಕೆಂಚಯ್ಯನ ದೊಡ್ಡಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಅಡ್ಡಾಡುತ್ತಾ ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳನ್ನು ತಿಂದು ಹಾಕಿತ್ತು ಅಷ್ಟೇ ಅಲ್ಲದೆ ವ್ಯಕ್ತಿಯೊಬ್ಬರನ್ನು ಬಲಿತೆಗೆದುಕೊಂಡಿತ್ತು. ಹೀಗಾಗಿ ಅರಣ್ಯ ಇಲಾಖೆ ಚಿರತೆಯ ಸೆರೆಗಾಗಿ ಕಾರ್ಯಾಚರಣೆ ನಡೆಸಿತ್ತು. ಆದರೂ ಚಿರತೆ ಅರಣ್ಯಾಧಿಕಾರಿಗಳ ಕಣ್ಣಿಗೆ ಬೀಳದೆ ತಪ್ಪಿಸಿಕೊಳ್ಳುತ್ತಿತ್ತು. ಹೀಗಾಗಿ ಹಲವಾರು ದಿನಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತಲೆನೋವು ತಂದಿತ್ತು.

ಈ ನಡುವೆ ಸಿಸಿ ಕ್ಯಾಮರಾ ಅಳವಡಿಸಿ ಚಿರತೆಯ ಚಲನವಲನ ಗಮನಿಸಿ ಬೋನು ಇರಿಸಲಾಗಿತ್ತು. ಇದೀಗ ಚಿರತೆ ಬೋನಿಗೆ ಬಿದ್ದಿದ್ದರಿಂದ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಅಲ್ಲದೆ ತಮ್ಮಲ್ಲಿದ್ದ ಆತಂಕ ದೂರವಾಗಿ ನೆಮ್ಮದಿಯಾಗಿ ಮನೆಯಿಂದ ಹೊರಬಂದು ಜಮೀನಿನಲ್ಲಿ ಕೆಲಸ ಮಾಡುವಂತಾಗಿದೆ.


Spread the love